ಕಲಿಕಾ ವಲಯಗಳು (ಬ್ಲೂಮ್ ರವರ ಪರಿಷ್ಕೃತ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣ)
ಕಲಿಕಾ
ವಲಯಗಳು (ಬ್ಲೂಮ್ ರವರ ಪರಿಷ್ಕೃತ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣ)
ಆಂಗ್ಲ ಪದ ʼTaxonomy’ ಎಂದರೆ, ವರ್ಗೀಕರಣ. ಶಿಕ್ಷಣ
ಕ್ಷೇತ್ರದಲ್ಲಿ ಬಳಸಲಾಗುವ ಉದ್ದೇಶಗಳ ಸ್ವಭಾವ ಮತ್ತು ವಿಧಗಳ ಬಗ್ಗೆ ತಿಳಿಯಲು ಪೂರ್ವ ನಿಯೋಜಿತ ವರ್ಗೀಕರಣ
ಸಹಕಾರಿ. ಕಲಿಯಲು ಅಗತ್ಯ ಚಟುವಟಿಕೆಗಳನ್ನು ಯೋಜಿಸುವುದು ಉದ್ದೇಶ ಯಾವ ಮಟ್ಟದಲ್ಲಿ ಹಾಗೂ ಯಾವ ತರಹದ್ದು
ಎಂದು ತಿಳಿದಾಗ ಸುಲಭ. ಸಾಮಾನ್ಯವಾಗಿ ಶಿಕ್ಷಣದ ಉದ್ದೇಶಗಳನ್ನು ʼವಸ್ತುʼ ವಿನ ಆಧಾರ ಬಳಸಿ ಮಾಡಿದ್ದರೆ
ವಾಸ್ತವಿಕ ವಲಯಗಳಲ್ಲಿ ವಿಂಗಡಣೆ ಮಾಡಿ ಹೇಳಬೇಕಾಗುತ್ತದೆ. ಬ್ಲೂಮ್ (1956) ತಾನು ರಚಿಸಿದ ವರ್ಗೀಕರಣ
ʼTaxonomy’ ಯಲ್ಲಿ ಶೈಕ್ಷಣಿಕ ಉದ್ದೇಶಗಳನ್ನು ವರ್ತನೆಯ ಆಧಾರದ ಮೇಲಿಂದ ವಿಂಗಡಿಸಿದ್ದಾನೆ. ಆತನ
ಪ್ರಕಾರ ಉದ್ದೇಶಗಳನ್ನು ಮೂರು ವಲಯಗಳಲ್ಲಿ ವಿಂಗಡಿಸಬಹುದು. ಆ ಮೂರು ವಲಯಗಳೆಂದರೆ,
- ಸಂಜ್ಞಾತ್ಮಕ
ವಲಯ
- ಭಾವನಾತ್ಮಕ
ವಲಯ ಮತ್ತು
- ಮನೋಚಲನಾತ್ಮಕ ವಲಯ
1990
ರಲ್ಲಿ ಬ್ಲೂಮ್ ನ ಶಿಷ್ಯನಾದ ಲೋರಿನ್ ಆಂಡರ್ಸನ್ ರವರು ಬ್ಲೂಮ್ ನ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣವನ್ನು
ಆಧುನೀಕರಿಸಿದ್ದಾರೆ. 21 ನೇ ಶತಮಾನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸರಿಹೊಂದುವಂತೆ ಆಧುನೀಕರಿಸಿದ್ದಾರೆ.
ಪರಿಭಾಷೆಯ ಬದಲಾವಣೆ
ಮೂಲಭೂತವಾಗಿ ಬ್ಲೂಮ್ ನ 6 ಮುಖ್ಯ ವಿಭಾಗಗಳು ನಾಮಪದದಿಂದ
ಕ್ರಿಯಾಪದಕ್ಕೆ ಬದಲಾವಣೆ ಮಾಡಲಾಗಿದೆ.
1.ಸಂಜ್ಞಾತ್ಮಕ ವಲಯ
- ನೆನಪಿಸಿಕೊಳ್ಳುವುದು: ಈ ಉದ್ದೇಶವು ಸ್ಮರಣೆ
ಮತ್ತು ಗುರುತಿಸುವುದು ಎಂಬ ಎರಡು ನಿರ್ದಿಷ್ಟ ಉದ್ದೇಶಗಳನ್ನು ಒಂಗೊಂಡಿದೆ.
- ಗ್ರಹಿಸಿಕೊಳ್ಳುವುದು/ಅರ್ಥೈಸಿಕೊಳ್ಳುವುದು:
ಇದೊಂದು ತಿಳುವಳಿಕೆಗೆ ಸಂಬಂದಿಸಿದ್ದು.
ಇಲ್ಲಿ ವಿದ್ಯಾರ್ಥಿಯು ಸಂವಹನ ಕ್ರಿಯೆಗೆ ಒಳಪಡುತ್ತಾನೆ ಹಾಗೂ ಹೋಲಿಸುವುದು, ವ್ಯತ್ಯಾಸ ಮಾಡುವುದು,
ಉದಾಹರಿಸುವುದು ಮುಂತಾದ ಕಲಿಕಾ ಕ್ರಿಯೆಗಳಲ್ಲಿ ಪಾಲ್ಗೊಳ್ಳುವನು.
- ಅನ್ವಯಿಸಿಕೊಳ್ಳುವುದು: ವಿದ್ಯಾರ್ಥಿಯು
ಅರ್ಥಮಾಡಿಕೊಂಡ ವಿಷಯಗಳನ್ನು ಸೂಕ್ತ ಸನ್ನಿವೇಶದಲ್ಲಿ ಅನ್ವಯ ಮಾಡಿಕೊಳ್ಳುವರು.
- ವಿಶ್ಲೇಷಣೆ ಮಾಡಿಕೊಳ್ಳುವುದು: ವಿದ್ಯಾರ್ಥಿಗಳು
ಅಮೂರ್ತ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಚಿಕ್ಕ ಚಿಕ್ಕ ಭಾಗಗಳಾಗಿ ವಿಶ್ಲೇಷಿಸಿ ವಿಷಯದ ಅರಿವನ್ನು
ಪಡೆಯುವರು.
- ಸಂಶ್ಲೇಷಿಸುವುದು: ಇದು ಚಿಕ್ಕ ಚಿಕ್ಕ
ಭಾಗಗಳನ್ನು/ಅಂಶಗಳನ್ನು ಒಗ್ಗೂಡಿಸುವುದಾಗಿದೆ, ಇದರಿಂದ ಪೂರ್ಣ ಅಂಶದ ತಿಳುವಳಿಕೆ ಮೂಡುತ್ತದೆ.
- ಸೃಷ್ಠಿಸುವುದು: ಕಲಿತ ಮತ್ತು ಅರ್ಥೈಸಿಕೊಂಡ
ವಿಷಯದ ಸಹಾಯದಿಂದ ಹೊಸ ಸನ್ನಿವೇಶ ಹಾಗೂ ಕಲ್ಪನೆಗಳನ್ನು ಸೃಷ್ಠಿಸುವರು.
2. ಭಾವನಾತ್ಮಕ ವಲಯ
1.ಪಡೆಯುವಿಕೆ/ಸ್ವಾಗತಿಸುವಿಕೆ: ಅನುಭವಗಳಿಗೆ ಸ್ಪಂದಿಸುವುದು, ಕೇಳಲು ಸಿದ್ದರಿರುವುದು.
ಈ ಉದ್ದೇಶದಲ್ಲಿ
ಕೇಳುವುದು, ಕೇಂದ್ರೀಕರಿಸುವುದು, ಹಾಜರಾಗುವುದು, ಪಾಲ್ಗೋಲ್ಲುವುದು, ಚರ್ಚೆ, ಪ್ರತಿಕ್ರಯಿಸುವುದು,
ಅನುಸರಿಸು, ಗಮನಹರಿಸುವುದು ಮುಂತಾದ ನಿರ್ದಿಷ್ಠಗಳು ಒಳಗೊಂಡಿವೆ.
2. ಪ್ರತಿಕ್ರಿಯೆ: ಕ್ರಿಯೆಗೆ ಪ್ರತಿಕ್ರಯಿಸುವುದು ಮತ್ತು ಚಟುವಟಿಕೆಯಿಂದ
ಪಾಲ್ಗೋಳ್ಳುವುದು.
ಇದರಲ್ಲಿ
ಪ್ರತಿಕ್ರಯಿಸುವುದು, ಸ್ಪಷ್ಟೀಕರಣವನ್ನು ಕೇಳುವುದು, ಅರ್ಥೈಸುವುದು, ಸ್ಪಷ್ಟೀಕರಣ ನೀಡುವುದು, ನಿದರ್ಶನದೊಂದಿಗೆ
ಉದಾಹರಿಸುವುದು, ಕೊಡುಗೆ ಕೊಡುವುದು ಇತ್ಯಾದಿ ನಿರ್ದಿಷ್ಠಗಳು ಒಳಗೊಂಡಿವೆ.
3.ಮೌಲ್ಯ: ವೈಯಕ್ತಿಕ ಅಭಿಪ್ರಾಯಗಳಲ್ಲಿ ಮೌಲ್ಯವನ್ನು ಸೇರಿಸುವುದು.
ಈ ಉದ್ದೇಶದಲ್ಲಿ
ವಾದ, ಸವಾಲು, ಚರ್ಚೆ, ಅಲ್ಲಗಳೆಯುವುದು, ಸಮರ್ಥಿಸುವುದು, ಮನವೊಲಿಸುವುದು ಇತ್ಯಾದಿ ನಿರ್ದಿಷ್ಠಗಳು
ಒಳಗೊಂಡಿವೆ.
4.ಮೌಲ್ಯಗಳನ್ನು ಸಂಘಟಿಸುವುದು ಅಥವಾ ಪರಿಕಲ್ಪಿಸುವುದು: ಆಂತರಿಕ ಸಂಘರ್ಷಗಳನ್ನು ಸಮನ್ವಯಗೊಳಿಸುವುದು,
ಮೌಲ್ಯಯುತ ವ್ಯವಸ್ಥೆಯನ್ನು ಬೆಳೆಸುವುದು.
ಇದರಲ್ಲಿ
ನಿರ್ಮಾಣ, ಬೆಳೆಸುವುದು, ರೂಪಿಸುವುದು, ರಕ್ಷಿಸುವುದು, ಮಾರ್ಪಡಿಸುವುದು, ಸಂಬಂಧ ಕಲ್ಪಿಸುವುದು,
ಸಮನ್ವಯಗೊಳಿಸುವುದು, ವಿಮರ್ಶೆ, ಇತ್ಯಾದಿ ನಿರ್ದಿಷ್ಠಗಳು ಒಳಗೊಂಡಿವೆ.
5.ಮೌಲ್ಯಗಳನ್ನು ಆಂತರಿಕವಾಗಿಸಿಕೊಳ್ಳುವಿಕೆ:
ನಂಬಿಕೆಯ
ವ್ಯವಸ್ಥೆ ಮತ್ತು ತತ್ವಶಸ್ತ್ರವನ್ನು ಅಳವಡಿಸಿಕೊಳ್ಳುವುದು. ಇದರಲ್ಲಿ ನಟಿಸುವುದು, ಪ್ರದರ್ಶಿಸುವಿಕೆ,
ಪ್ರಭಾವ, ಪರಿಹರಿಸು, ಅಭ್ಯಸಿಸುವುದು ಇತ್ಯಾದಿ ನಿರ್ದಿಷ್ಠಗಳು ಒಳಗೊಂಡಿವೆ.
3.ಮನೋಚಲನಾತ್ಮಕ ವಲಯ
1. ಅನುಕರಣೆ: ಇತರರ
ಅಭಿನಯ, ಕ್ರಿಯೆಯನ್ನು ನಕಲು ಮಾಡುವುದು. ಸೂಕ್ಷ್ಮವಾಗಿ ವೀಕ್ಷಿಸಿ ಅವರ ವರ್ತನೆ/ನಡವಳಿಕೆಯನ್ನು ಪುನರಾವರ್ತಿಸುವುದು.
ಇದರಲ್ಲಿ
ನಕಲು, ಅನುಸರಿಸುವುದು, ಪುನರಾವರ್ತನೆ, ಮರುಸೃಷ್ಠಿಸು, ಇತ್ಯಾದಿ ನಿರ್ದಿಷ್ಠಗಳು ಒಳಗೊಂಡಿವೆ.
2.ಕುಶಲತೆ: ಸೂಚನೆಗಳನ್ನು /ನೆನಪನ್ನು
ಅನುಸರಿಸಿ ಪುನರುತ್ಪಾದಿಸುವುದು. ಇದರಲ್ಲಿ ಮರುಸೃಷ್ಠಿ, ನಿರ್ಮಾಣ, ಕಾರ್ಯರೂಪಕ್ಕೆ ತರುವುದು, ಪಡೆಯುವುದು,
ಇತ್ಯಾದಿ ನಿರ್ದಿಷ್ಠಗಳು ಒಳಗೊಂಡಿವೆ.
3. ನಿಖರತೆ: ಕೌಶಲ್ಯವನ್ನು ವಿಶ್ವಾಸನೀಯತೆಯಿಂದ,
ಸಹಾಯ ಪಡೆದುಕೊಳ್ಳದೇ, ತ್ವರಿತಗತಿಯಲ್ಲಿ, ಮೃದುವಾಗಿ, ನಿಖರತೆಯಿಂದ ಪ್ರದರ್ಶಿಸುವುದು. ಇದರಲ್ಲಿ
ಪ್ರದರ್ಶಿಸು, ಪೂರ್ಣಗೊಳಿಸು, ತೋರಿಸು, ಪರಿಪೂರ್ಣ, ಮಾಪನಾಂಕ, ಮುಂತಾದ ನಿರ್ದಿಷ್ಠಗಳು ಒಳಗೊಂಡಿವೆ.
4. ಸ್ಪಷ್ಟೋಚ್ಚಾರಣೆ: ಹೊಂದಿಕೊಳ್ಳುವುದು ಮತ್ತು
ಪರಿಣತಿಯನ್ನು ಸಂಯೋಜಿಸು, ಹೊಸ ಸನ್ನಿವೇಶ ಅಥವಾ ಕಾರ್ಯವನ್ನು ತೃಪ್ತಿಕರಗೊಳಿಸುವುದು. ಇದರಲ್ಲಿ ಪರಿಹಾರ,
ಹೊಂದಿಕೊಳ್ಳು, ಒಗ್ಗೂಡು, ಸಂಘಟಿಸು, ಪರಿಷ್ಕರಿಸು, ಸಂಯೋಜನೆ, ಪ್ರಗತಿ, ಮಾರ್ಪಡು ಮಾಡು, ಮುಂತಾದ
ನಿರ್ದಿಷ್ಠಗಳು ಒಳಗೊಂಡಿವೆ.
5. ನೈಸರ್ಗೀಕರಣ/ದೇಶೀಕರಣ: ಆಯಾ ಕಟ್ಟಿನ ಹಂತದಲ್ಲಿ ಸಹಜ ಪ್ರವೃತ್ತಿ, ಪ್ರಯತ್ನವಿಲ್ಲದ,
ಚಟುವಟಿಕೆಯ ಪಾಂಡಿತ್ಯ ಮತ್ತು ಸಂಬಂಧಿತ ಕೌಶಲ್ಯಗಳ ಪ್ರಕಟಿಸುವುದು. ಇದರಲ್ಲಿ ನಿರ್ಮಾಣ, ಸಂಯೋಜನೆ,
ಸೃಷ್ಠಿಸುವುದು, ಯೋಜಿಸು, ಸೂಚಿಸು, ನಿರ್ವಹಿಸು, ಆವಿಷ್ಕಾರ, ಯೋಜನಾ ನಿರ್ವಹಣೆ, ಉತ್ಪತ್ತಿ ಮಾಡುವುದು/ಆರಂಭಿಸುವುದು.
ಮುಂತಾದ ನಿರ್ದಿಷ್ಠಗಳು ಒಳಗೊಂಡಿವೆ.

Comments
Post a Comment