ಮೌಲ್ಯಮಾಪನದ ವಿಧಗಳು

 

ಮೌಲ್ಯಮಾಪನದ ವಿಧಗಳು

  1. ರೂಪಣಾತ್ಮಕ/ರಚನಾತ್ಮಕ ಮೌಲ್ಯಮಾಪನ:

     ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಯಲ್ಲಿ ಉಂಟಾಗುವ ಕಲಿಕೆಯ ಪ್ರಗತಿಯನ್ನು ತಿಳಿಯಲು ಈ ವಿಧಾನದ ಮೌಲ್ಯಮಾಪನವನ್ನು ಬಳಸಲಗುವುದು. ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕಲಿಕಯಲ್ಲಿನ ಯಶಸ್ಸು ವಿಫಲತೆಗಳ ಬಗ್ಗೆ ನಿರಂತರವಾಗಿ ಹಿಮ್ಮಾಹಿತಿ ಒದಗಿಸುವುದೇ ಇದರ ಪ್ರಮುಖ ಉದ್ದೇಶ. ವಿದ್ಯಾರ್ಥಿಗಳಿಗೆ ಇದರಿಂದ ದೊರೆಯುವ ಹಿಮ್ಮಾಹಿತಿಯು ಕಲಿಕೆಯಲ್ಲಿನ ಅವನ ಯಶಸ್ಸನ್ನು ಪುಷ್ಟೀಕರಿಸುತ್ತದೆ ಮತ್ತು ನಿರ್ದಿಷ್ಟ ಕಲಿಕೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿರುವ ಕಲಿಕಾ ದೋಷಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಶಿಕ್ಷಕರಿಗೆ ದೊರೆಯುವ ಹಿಮ್ಮಾಹಿತಿ ಅವರ ಬೋಧನಾ ವಿಧಾನಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲು ಮತ್ತು ಸೂಕ್ತ ಗುಂಪಿನ ಹಾಗೂ ವೈಯಕ್ತಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತದೆ. ರೂಪಣಾತ್ಮಕ ಮೌಲ್ಯಮಾಪನವು ಬೋಧನೆಯ ಹಂತದಲ್ಲಿ ಪ್ರತಿಯೊಂದು ಬೋಧನಾ ಘಟಕಕ್ಕೆ ರೂಪಿಸುವ ಪರೀಕ್ಷೆಗಳನ್ನೊಳಗೊಳುತ್ತದೆ. ಈ ಘಟಕ ಪರೀಕ್ಷೆಗಳು ಪ್ರತಿಇಯೊಂದು ಹಂತದಲ್ಲಿ ನಾವು ವಿದ್ಯಾರ್ಥಿಗಳಲ್ಲಿ ಕಾಣಬೇಕಾದ ಅಪೇಕ್ಷಿತ ಕಲಿಕೆಯ ಫಲಗಳನ್ನು ಕಂಡುಕೊಳ್ಳಲು ನೀಡುವ ಪ್ರಭುತ್ವದ ಪರೀಕ್ಷೆಗಳಾಗಿವೆ. ರೂಪಣಾತ್ಮಕ ಮೌಲ್ಯಮಾಪನದಲ್ಲಿ ಬಳಸುವ ಪರೀಕ್ಷೆಗಳು ಸಾಮಾನ್ಯವಾಗಿ ಶಿಕ್ಷಕ ನಿರ್ಮಿತ ಪರೀಕ್ಷೆಗಳಾಗಿರುತ್ತವೆ.  ಇದರೊಂದಿಗೆ ವೀಕ್ಷಣಾ ತಂತ್ರಗಖು ವಿದ್ಯಾರ್ಥಿಗಳ ಪ್ರಗತಿಯನ್ನು ತಿಳಿದುಕೊಳ್ಳಲು ಮತ್ತು ಕಲಿಕಾ ದೋಷಗಳನ್ನು ಪತ್ತೆ ಹಚ್ಚಲು ನೆರವಾಗುತ್ತವೆ. ಈ ಮೌಲ್ಯಮಾಪನ ಕಲಿಕೆ ಮತ್ತು ಬೋಧನೆಯಲ್ಲಿ ಸುಧಾರಣೆ ತರುವ ಪ್ರಮುಖ ಉದ್ದೇಶವನ್ನೊಳಗೊಂಡಿದೆ.

ಉದ್ದೇಶಗಳು:

1. ವಿದ್ಯಾರ್ಥಿಯ ಕಲಿಕೆಯ ಪ್ರಗತಿಯನ್ನು ತಿಳಿಯುವುದು.

2. ವಿದ್ಯಾರ್ಥಿ ಮತ್ತು ಶಿಕ್ಷಕ ಇಬ್ಬರಿಗೂ ಕಲಿಕೆಯ ಸಫಲತೆ ಮತ್ತು ವಿಫಲತೆಯ ಬಗ್ಗೆ ನಿರಂತರ ಹಿಮ್ಮಾಹಿತಿ

   ಒದಗಿಸಲು.

3. ಶಿಕ್ಷಕನ ಯೋಜನೆಯಂತೆ ಕಲಿಕೆ ಉಂಟಾಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಲು.

4. ರಚನಾತ್ಮಕ ಮೌಲ್ಯಮಾಪನದಿಂದ ಪಡೆದುಕೊಂಡ ನಿರಂತರ ಹಿಮ್ಮಾಹಿತಿಯ ಯಶಸ್ಸು ಕಲಿಕೆಯನ್ನು

    ಪುನರ್ಬಲನಗೊಳಿಸುತ್ತದೆ ಮತ್ತು ತಿದ್ದುಪಡಿಗೆ ಅವಶ್ಯವಿರುವ ಕಲಿಕಾ ತಪ್ಪುಗಳನ್ನು ಗುರುತಿಸುತ್ತದೆ.

5.  ವರ್ಗಕೊಣೆಯ ಬೋಧನೆಯಲ್ಲಿ ಸುಧಾರಣೆ ತರುವುದು.

6. ವಿದ್ಯಾರ್ಥಿಗಳಲ್ಲಿ ವೈಯಕ್ತಿಕವಾಗಿ ಪರಿಹಾರಾತ್ಮಕ ಕಾರ್ಯವನ್ನು ಸೂಚಿಸುತ್ತದೆ.

7. ಪಠ್ಯಕ್ರಮದ ಸಾಧನ ಸಲಕರಣೆಗಳ ಮತ್ತು ನಿರ್ದಿಷ್ಟ ಅಂಶಗಳ ಪರಿಮಾಣಾತ್ಮಕದ ಬಗ್ಗೆ ಸಾಕ್ಷಿ ಅಥವಾ

    ಪುರಾವೆಯನ್ನು ಒದಗಿಸುವುದು.

ರೂಪಣಾತ್ಮಕ ಮೌಲ್ಯಮಾಪನದ ಮಹತ್ವ:

1.     ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದು.

2.     ಕಲಿಕೆಯ ಮುನ್ನಡೆಗೆ ಪ್ರೇರಣೆ ನೀಡುತ್ತದೆ.

3.     ಶಿಕ್ಷಕನಲ್ಲಿಯೂ ಅಧ್ಯಾಪನ ವಿಷಯವಾಗಿ ಆತ್ಮವಿಶ್ವಾಸ ಬೆಳೆಯುತ್ತದೆ.

4.     ವಿದ್ಯಾರ್ಥಿಗಳ ಅಧ್ಯಯನ ದಿನನಿತ್ಯ ಕ್ರಮಬದ್ದವಾಗಿ ಸಾಗುವುದು. ಕಲಿಕೆಯ ದೋಷಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯ.

5.     ನಿರಂತರ ಅಭ್ಯಾಸದಿಂದ ಮಕ್ಕಳ ಅಹಿತಕರ ಚಟುವಟಿಕೆಗಳು ದೂರವಾಗುತ್ತವೆ.

6.     ಪ್ರಗತಿ ವಿಚಾರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವುದರಿಂದ ಎದುರಿಸುವ ಸಮಸ್ಯೆಗಳ ಅರಿವು ಉಂಟಾಗುತ್ತದೆ.

7.      ಬರವಣಿಗೆ ವೇಗವನ್ನು ಹೆಚ್ಚುಸುತ್ತದೆ.

8.     ವಿದ್ಯಾರ್ಥಿಗಳಲ್ಲಿ ವಿಷಯ ಸಂಜಸತೆಯಿಂದ ಕೂಡಿರಲು ಸಾಧ್ಯವಾಗುತ್ತದೆ.

9.     ಶಬ್ಧಸಂಗ್ರಹ, ವಾಕ್ಯಗಳ ರಚನೆ, ಉತ್ತರ ಆರಂಭ, ಮುಕ್ತಾಯ, ವಿಷಯ ವಿಶ್ಲೇಷಣೆ, ವಿಮರ್ಶೆ ಇವೆಲ್ಲವೂ ಸಂದರ್ಭಕ್ಕನುಸಾರ ತಿಳಿದುಕೊಳ್ಳಲು ಸಹಾಯಕ.

  1. ಸಂಕಲನಾತ್ಮಕ ಮೌಲ್ಯಮಾಪನ:

      ಸಂಕಲನಾತ್ಮಕ ಮೌಲ್ಯಮಾಪನವು ಶೈಕ್ಷಣಿಕ ಅವಧಿಯ ಕೊನೆಯಲ್ಲಿ ಅಥವಾ ಬೋಧನಾ-ಕಲಿಕಾ ಚಟುವಟಿಕೆಗಳು ಪೂರ್ಣಗೊಂಡ ನಂತರ ಕೈಗೊಳ್ಳುವ ಮೌಲ್ಯಮಾಪನ ವಿಧಾನವಾಗಿದೆ. ಬೋಧನಾ ಉದ್ದೇಶಗಳು ಎಷ್ಟರ ಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು ತಿಳಿಯಲು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿಯ ಕೊನೆಯಲ್ಲಿ ಶ್ರೇಣಿಗಳನ್ನು ನೀಡಲು ಈ ಮೌಲ್ಯಮಾಪನ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಬಳಸುವ ತಂತ್ರಗಳನ್ನು ಬೋಧನಾ ಉದ್ದೇಶಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಶಿಕ್ಷಕ ನಿರ್ಮಿತ ಸಾಧನಾ ಪರೀಕ್ಷೆಗಳು, ಕಾರ್ಯ ಕ್ಷಮತೆಯ ಪರೀಕ್ಷೆಗಳು (ಉದಾ: ಪ್ರಾಯೋಗಿಕ ಪರೀಕ್ಷೆ, ಮೌಖಿಕ ಪರೀಕ್ಷೆ) ಮತ್ತು ಉತ್ಪನ್ನಗಳ ಮೌಲ್ಯಮಾಪನ (ಚಿತ್ರಗಳು, ಮಾದರಿಗಳು ಮತ್ತು ಸಂಶೋಧನಾ ವರದಿಗಳು) ವನ್ನು ಬಳಸಲಾಗುತ್ತದೆ. ಸಂಕಲನಾತ್ಮಕ ಮೌಲ್ಯಮಾಪನದ ಪ್ರಮುಖ ಉದ್ದೇಶವು ವಿದ್ಯಾರ್ಥಿಗಳ ಪ್ರಭುತ್ವವನ್ನಾಧರಿಸಿ ಶ್ರೇಣಿ ಅಥವಾ ಪ್ರಮಾಣ ಪತ್ರಗಳನ್ನು ನೀಡುವುದಾಗಿದೆ. ಇದರ ಜೊತೆಗೆ ಒಂದು ವಿಷಯದ ಬೋಧನೆಯ ಉದ್ದೇಶಗಳ ಸೂಕ್ತತೆ ಮತ್ತು ಬೋಧನೆಯ ಪರಿಣಾಮವನ್ನು ತೀರ್ಮಾನಿಸಲು ನೆರವಾಗುತ್ತದೆ.

ಸಂಕಲನಾತ್ಮಕ ಮೌಲ್ಯಮಾಪನದ ಉಪಯೋಗಗಳು:

  1. ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಅಂಕಗಳನ್ನು ಅಥವಾ ಶ್ರೇಣಿಯನ್ನು ನೀಡಲು.
  2. ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಪ್ರಮಾಣೀಕರಿಸುವುದು.
  3. ಪೂರ್ವ ನಿರ್ಧಾರಿತ ಅವಧಿಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಊಹಿಸುವುದು.
  4. ವಿವಿಧ ಗುಂಪುಗಳ ಅಥವಾ ವ್ಯಕ್ತಿಗಳ ಕಲಿಕಾ ಫಲಗಳನ್ನು ಹೋಲಿಸಲು.

ಸಂಕಲನಾತ್ಮಕ ಮೌಲ್ಯಮಾಪನದ ಉದ್ದೇಶ:

1.     ಮಕ್ಕಳ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತಿಳಿಯಲು.

2.     ಶಿಕ್ಷಕನ ಬೋಧನಾ ವಿಧಾನಗಳ ಸಾಫಲ್ಯತೆ ತಿಳಿಯಲು.

3.     ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲು.

4.     ಕಲಿಕೆಯ ಲೋಪ-ದೋಷಗಳನ್ನು ಗುರುತಿಸಿ ಅವುಗಳಿಗೆ ಚಿಕಿತ್ಸೆ ನೀಡಲು.

5.     ಬೋಧಕನಿಂದ ಕಲಿತ ವಿಷಯ ಮಕ್ಕಳಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯಲು.

 

ಸಂಕಲನಾತ್ಮಕ ಮೌಲ್ಯಮಾಪನದ ಮಹತ್ವ:

1.     ಸಂಕಲನಾತ್ಮಕ ಮೌಲ್ಯಮಾಪನವು ಮಕ್ಕಳಿಗೆ ದರ್ಜೆಗಳನ್ನು ಕೊಡಲು.

2.     ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಸ್ವಮೌಲ್ಯಮಾಪನ ಮಾಡಿಕೊಂಡು ಮುನ್ನಡೆಯಲು ತುಂಬಾ ಸಹಾಯಕ.

3.     ಇದು ಮುಂದಿನ ಅಧ್ಯಯನಕ್ಕೆ ಅನುಕೂಲಕರವಾಗಿದೆ.

4.     ವಿದ್ಯಾರ್ಥಿಗಳನ್ನು ವಿವಿಧ ದರ್ಜೆಗಳಲ್ಲಿ ಹೋಲಿಕೆ ಮಾಡಲು.

5.     ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ದೋಷಗಳನ್ನು ಗುರುತಿಸಿ ಮುಂದೆ ಜರುಗದಂತೆ ಚಿಕಿತ್ಸೆ, ಪರಿಹಾರ ನೀಡುವುದು.

ರೂಪಣಾತ್ಮಕ ಮತ್ತುಸಂಕಲನಾತ್ಮಕ ಮೌಲ್ಯಮಾಪನದ ವ್ಯತ್ಯಾಸಗಳು:

 

ರೂಪಣಾತ್ಮಕ ಲ್ಯಮಾಪನ

ಸಂಕಲನಾತ್ಮಕ ಮೌಲ್ಯಮಾಪನ

  1. ರೂಪಣಾತ್ಮಕ ಮೌಲ್ಯಮಾಪನ ಶೈಕ್ಷಣಿಕ ವರ್ಷದ ಆರಂಭದಿಂದ ಮೌಲ್ಯಮಾಪನ ಆರಂಭ.
  1. ಸಂಕಲನಾತ್ಮಕಮೌಲ್ಯಮಾಪನ ಕಾರ್ಯ ವರ್ಷದ ಕೊನೆಯಲ್ಲಿ ನಡೆಯುವುದು.
  1. ಇಲ್ಲಿ ಶ್ರೇಣಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದಿಲ್ಲ.
  1. ಕೌಶಲ್ಯಗಳ ಹಾಗೂ ಅರ್ಹತೆಗಳ ಶ್ರೇಣಿ   

ಹಾಗೂ ಪ್ರಮಾಣ ಪತ್ರ ನೀಡಿ, ಪಾಲಕರಿಗೆ ವರದಿ ಒಪ್ಪಿಸುವುದು.

      3.  ವಿದ್ಯಾರ್ಥಿಗಳ ಕಲಿವಿನ ತೊಂದರೆ

          ಶೀಘ್ರವಾಗಿ ಪತ್ತೆ ಹಚ್ಚಬಹುದು.

  1. ಕೊನೆಯಲ್ಲಿ ಕಲಿವಿನ ದೋಷ ಕಂಡುಬಂದರೂ ಪರಿಹಾರ ಸಿಗದು.
  1. ಆರಂಭದ ಕಲಿಕೆಯಿಂದ ಸಾಮರ್ಥ್ಯ ಹೆಚ್ಚು ನಿಖರವಾದುದು.

     4.  ಸಾಮರ್ಥ್ಯದಲ್ಲಿ ನಿಖರತೆ ಅಷ್ಟಾಗಿ

        ಕಾಣುವುದಿಲ್ಲ.

  1. ವಿದ್ಯಾರ್ಥಿಯ ನಿಖರ ದೌರ್ಬಲ್ಯ ಗುರುತಿಸುವುದು.

     5. ಇಲ್ಲಿ ಮಾಹಿತಿ ಹಾಗೂ ಗ್ರಹಿಕೆಯು ಅಸಾಧ್ಯ.

  1. ವಿದ್ಯಾರ್ಥಿಯ ಅರ್ಹ ಸಾಮರ್ಥ್ಯ ಕುರಿತು ನಿಖರ ಮಾಹಿತಿ ಸಂಗ್ರಹ ಮತ್ತು ಗ್ರಹಿಕೆ ಸಾಧ್ಯ.

     6.  ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳು

       ತಲೆದೋರಿದಾಗ ಸ್ವಚಿತವಾಗಿ    

        ನಡೆಯುವುದುಂಟು.

  1. ನಿರಂತರ ಮೌಲ್ಯಮಾಪನದಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ವಿಷಯ ಕುರಿತು ಆತ್ಮವಿಶ್ವಾಸ ಹುಟ್ಟುತ್ತದೆ.

    7. ಇಲ್ಲಿ ಅಷ್ಟಾಗಿ ಆತ್ಮವಿಶ್ವಾಸ ಕಂಡುಬರುವುದಿಲ್ಲ.

 

ನೈಧಾನಿಕ ಪರೀಕ್ಷೆ:

     ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ವಿದ್ಯಾರ್ಥಿಯ ದೌರ್ಬಲ್ಯಗಳನ್ನು ಪತ್ತೆ ಮಾಡುವ ಪರೀಕ್ಷಣಗಳಿಗೆ ನೈದಾನಿಕ ಪರೀಕ್ಷಣಗಳು ಎನ್ನುವರು. ವಿದ್ಯಾರ್ಥಿಯು ಪ್ರಕಟಿಸಬೇಕಾದ ವರ್ತನೆಯ ಘಟ್ಟಗಳನ್ನು ಗುರ್ತಿಸಿ, ಯಾವ ಘಟಕದಲ್ಲಿ ವಿದ್ಯಾರ್ಥಿಯು ತೊಂದರೆಯಿದೆ, ದೋಷವಿದೆ ಎಂಬುದನ್ನು ಈ ಪರೀಕ್ಷಣಗಳು ನಿರ್ಧರಿಸುತ್ತವೆ.

ನೈಧಾನಿಕ ಪರೀಕ್ಷೆಯ ಉಪಯೋಗಗಳು:

  1. ವಿದ್ಯಾರ್ಥಿಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಅಥವಾ ದೌರ್ಬಲ್ಯಗಳನ್ನು ಕಂಡುಹಿಡಿಯಲು ಸಹಕಾರಿಯಾಗಿದೆ.
  2. ಉಪಾಧ್ಯಾಯರು ಎಷ್ಟೇ ಪರಿಣಾಮಕಾರಿಯಾಗಿ ಬೋಧಿಸಿದರೂ ಹಲವು ವಿದ್ಯಾರ್ಥಿಗಳು ವೈಯಕ್ತಿಕ ಸಮಸ್ಯೆಗಳಲ್ಲಿ ತೊಳಲಾಡುತ್ತಿರುತ್ತಾರೆ.
  3. ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಅರಿತು ಬೋಧಿಸಲು ಸಹಕಾರಿಯಾಗುತ್ತದೆ.
  4. ವಿದ್ಯಾರ್ಥಿಯು ಯಾವುದನ್ನು ಎಷ್ಟರ ಮಟ್ಟಿಗೆ ಮತ್ತು ಯಾವುದರಲ್ಲಿ ಅಭಿರುಚಿ ಇದೆ ಎಂಬುದನ್ನು ತಿಳಿಯಲು ಉಪಯೋಗಾರ್ಹವಾಗಿದೆ.
  5. ಶಿಕ್ಷಣದ ಗುಣಮಟ್ಟ ಮತ್ತು ಉತ್ತಮ ಕಲಿಕೆಯನ್ನು ಕಾಪಾಡಿಕೊಂಡು ಹೋಗುವುದಕ್ಕೆ ಉಪಯುಕ್ತವಾಗಿದೆ.
  6. ಬೋಧಿಸಿದ ಬೋಧನೆ ಫಲಕಾರಿಯಾಗುವುದಕ್ಕೆ ಸಹಾಯಕವಾಗಿದೆ.

ಪೂರ್ವಚಿಹ್ನೆಯ ಪರೀಕ್ಷೆ (ಪ್ರೊಗ್ನಾಸ್ಟಿಕ್‌ ಪರೀಕ್ಷೆ)

ಅರ್ಥ:

  1. ಪೂರ್ವಚಿಹ್ನೆಯ ಪರೀಕ್ಷೆಯು ವಿದ್ಯಾರ್ಥಿಯು ಎಷ್ಟರ ಮಟ್ಟಿಗೆ ಚೆನ್ನಾಗಿ ಶಾಲಾ ವಿಷಯವನ್ನು ಅಥವಾ ಕಾರ್ಯವನ್ನು ಮಾಡುವ ಸಾಧ್ಯತೆ ಇದೆ ಎಂಬುದಾಗಿ ಅಳೆದು ಊಹಿಸುವ ಪರೀಕ್ಷೆಯಾಗಿದೆ.
  2. ಒಬ್ಬ ವಿದ್ಯಾರ್ಥಿಯು ನಿರ್ದಿಷ್ಟ ವಿಷಯವನ್ನು ಎಷ್ಟು ಚೆನ್ನಾಗಿ ಕಲಿಯುವ ಸಾಧ್ಯತೆ ಇದೆ ಎಂದು ಊಹಿಸಲು ಯೋಜಿಸಿದ/ ಸಿದ್ದಪಡಿಸಿದ ಪರೀಕ್ಷೆಯೇ ಪೂರ್ವಚಿಹ್ನೆಯ ಪರೀಕ್ಷೆ.
  3.  ವಿದ್ಯಾರ್ಥಿಯ ಭವಿಷ್ಯದ ವೃತ್ತಿಯನ್ನು ಅಂದಾಜು ಮಾಡುವ ಮತ್ತು ಊಹಿಸುವ ರೀತಿ ಪೂರ್ವಚಿಹ್ನೆಯ ಪರೀಕ್ಷೆಯು ಕಾರ್ಯನಿರ್ವಹಿಸುತ್ತದೆ.

ಉಪಯೋಗಗಳು:

  1. ಪೂರ್ವಚಿಹ್ನೆಯ ಪರೀಕ್ಷೆಯು ಮಾಹಿತಿಯ ಭಂಢಾರವನ್ನು ಒದಗಿಸುತ್ತದೆ.
  2. ಜ್ಞಾನಧಾರಣೆಯನ್ನು ಸಲಹುತ್ತದೆ.
  3. ಉನ್ನತ ಮಟ್ಟದ ಸಾಧಕರನ್ನು ಮುಂಚಿತವಾಗಿ ಪತ್ತೆ ಹಚ್ಚುತ್ತದೆ.
  4. ಮಾಪನ ವಿಧಾನದ ಸ್ಥಿರತೆಯನ್ನು ಕಾಪಾಡುತ್ತದೆ.
  5. ಅತ್ಯುತ್ತಮ ಮಾನದಂಡ ಅವಕಾಶಗಳನ್ನು ಒದಗಿಸುತ್ತದೆ.

ನಿಕಷ ಆಧಾರಿತ ಪರೀಕ್ಷೆ:

       ಪ್ರೋಪಾಮ್‌ ಮತ್ತು ಹುಸೇಕ್‌ ಟಿ. ಆರ್. ‌ ಇವರ ಪ್ರಕಾರ ನಿಕಷ ಆಧಾರಿತ ಪರೀಕ್ಷೆಗಳು ಅಳತೆ ಮಾಡುವುದು ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯನ್ನು ಒಂದು ನಿರ್ದಿಷ್ಟ ನಿಕಷಕ್ಕೆ ಸರಿದೂಗಿಸಿ ನೋಡುವುದರ ಮೂಲಕ ಅವನ ಸಾಧನಾ ಮಟ್ಟವನ್ನು ಗುರ್ತಿಸುವುದು.

     ಒಬ್ಬ ವ್ಯಕ್ತಿಯ ಸಾಧನೆಯನ್ನು ಪೂರ್ವ ನಿರ್ಧಾರಿತ ನಿಕಷಗಳಿಗೆ ಹೋಲಿಸಿ ನೋಡುವುದು ನಿಕಷ ಆಧಾರಿತ ಪರೀಕ್ಷೆ. ಇಲ್ಲಿ ನಾವು ಒಬ್ಬ ವ್ಯಕ್ತಿ ಏನು ಸಾಧನೆ ಮಾಡಿದ್ದಾನೆ ಎಂಬುದನ್ನು ತಿಳಿಯುವುದು ಮುಖ್ಯವೇ ಹೊರತು, ಬೇರೊಬ್ಬರ ಜೊತೆಗೆ ಅವರ ಸ್ಥಾನ ಮಾನವನ್ನು ಗುರ್ತಿಸುವುದಿಲ್ಲ.

ಉದ್ದೇಶಗಳು

  1. ಪಠ್ಯ ಆಧಾರಿತ ವಿದ್ಯಾರ್ಥಿಗಳ ಕೌಶಲ್ಯಗಳ ಸಾಧನೆಯನ್ನು ಅಳೆಯುತ್ತದೆ.
  2. ಇದು ನಿರ್ದಿಷ್ಟವಾದ ದರ್ಜೆ ಅಥವಾ ತರಬೇತಿ ಮಟ್ಟವನ್ನು ಹೊಂದಿದೆ.
  3. ಸರಿಯಾದ ಗುರಿ ಮತ್ತು ಉದ್ದೇಶಗಳನ್ನು ಪ್ರಸ್ತುತಪಡಿಸುತ್ತದೆ.
  4. ಪಠ್ಯವಸ್ತು ಯೋಜನೆ, ಬೋಧನೆ, ಪ್ರಗತಿ ಮತ್ತು ವಿದ್ಯಾರ್ಥಿಗಳ ಗುಂಪು ವರ್ತನೆಯನ್ನು ಮೌಲ್ಯಮಾಪನ ಮಾಡುತ್ತದೆ.
  5. ಇದನ್ನು ಬೋಧನೆಯ ಪೂರ್ವ ಮತ್ತು ನಂತರ ಬಳಸಬಹುದು.
  6. ಇದು ತನ್ನ ಸಾಮಾನ್ಯ ವರದಿಯಲ್ಲಿ ಕನಿಷ್ಟ ಅಂಕಗಳು ಮತ್ತು ಕೌಶಲ್ಯಗಳ ಪ್ರಬುದ್ದ ಕಲಿಕೆಯ ಕ್ಷೇತ್ರವನ್ನು ತಿಳಿಸುತ್ತದೆ.

ನಿಕಷ ಆಧಾರಿತ ಪರೀಕ್ಷೆಯ ಉಪಯೋಗಗಳು

  1. ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಹೊಂದಿರುವ ದೋಷಗಳನ್ನು ಗುರ್ತಿಸುತ್ತದೆ. ಮತ್ತು ಇತರ ವಿದ್ಯಾರ್ಥಿಗಳ ಮಟ್ಟಕ್ಕೆ ತರಲು ಅವರಿಗೆ ವಿಶೇಷ ಪರಿಹಾರಾತ್ಮಕ ಕಾರ್ಯಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ.
  2. ಇದು ತರಗತಿಯಲ್ಲಿ ಪ್ರಭುತ್ವ ಕಲಿಕೆ ಹೊಂದಿದವರು ಮತ್ತು ಹೊಂದದವರನ್ನು ಗುರ್ತಿಸುತ್ತದೆ.
  3. ಬೋಧನೆಯ ಸಾಧಿಸಲ್ಪಟ್ಟ ವಿವಿಧ ಉದ್ದೇಶಗಳನ್ನು ಗುರ್ತಿಸುತ್ತದೆ.
  4. ಬೇರೆ ಬೇರೆ ಹಂತದಲ್ಲಿ ಅಳವಡಿಸಲು ಉತ್ತಮ ಪರಿಕಲ್ಪನೆಗಳನ್ನು ಹುಡುಕುತ್ತದೆ.
  5. ಪರಿಕಲ್ಪನೆಯು ಎಷ್ಟರ ಮಟ್ಟಿಗೆ ಕಲಿಯಲ್ಪಟ್ಟಿದೆ ಎಂಬುದನ್ನು ಗುರ್ತಿಸುತ್ತದೆ.
  6. ಒಬ್ಬ ವಿದ್ಯಾರ್ಥಿಯ ಜೊತೆಗೆ ಬೋಧನಾ ಕಾರ್ಯಕ್ರಮದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯ ಆಧಾರಿತ ಪರೀಕ್ಷೆ:

      ಗ್ರೋನ್‌ ಲಂಡ್‌, (1976)ರ ಪ್ರಕಾರ: “ ಒಬ್ಬ ವಿದ್ಯಾರ್ಥಿಯ ಸಾಧನೆಯನ್ನು ನಿಗದಿತ ಸಾಮಾನ್ಯಕ್ಕೆ ಹೋಲಿಸಿ ಅವನ ಸ್ಥಾನವನ್ನು ಗುರುತಿಸುವ ಪರೀಕ್ಷೆಯೇ ಸಾಮಾನ್ಯಕ ಆಧಾರಿತ ಪರೀಕ್ಷೆ.

     ಉದಾ: ಆಯ್ಕೆ, ಗುಂಪು ಮಾಡುವುದು. ವರ್ಗಗಳನ್ನು ಮಾಡುವುದು. ಇವುಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಮಾಡಬಹುದು. ಈ ಪರೀಕ್ಷೆಯನ್ನು ಮುಲತಃ ವಿದ್ಯಾರ್ಥಿ ಸಾಧನೆಯನ್ನು ಅದೇ ತರಗತಿಯ ಇತರ ವಿದ್ಯಾರ್ಥಿಗಳ ಜೊತೆಗೆ ಹೋಲಿಸುವಾಗ ಈ ಗುಂಪು ಸಾಮಾನ್ಯಕವಾಗುತ್ತದೆ. ಆ ಗುಂಪನ್ನು ಸ್ಥಾನಿಕ, ಜಿಲ್ಲೆ, ದೇಶದ ಮಟ್ಟದಲ್ಲಿ ಮಾಡಬಹುದು. ಸಾಮಾನ್ಯಕ ಆಧಾರಿತ ಪರೀಕ್ಷೆಗಳನ್ನು ತಯಾರಿಸುವುದು, ಸ್ವಲ್ಪ ವ್ಯವಹಾರಿಕ ಆದುದರಿಂದ ಇವುಗಳನ್ನು ಪ್ರಚಾರಕರು ಸಿದ್ದಪಡಿಸುತ್ತಾರೆ.

ಸಾಮಾನ್ಯಕ ಆಧಾರಿತ ಪರೀಕ್ಷೆಯ ಉಪಯೋಗಗಳು

  1. ಮುಂದಿನ ವಿವಿಧ ಆಗುಹೋಗುಗಳನ್ನು ಹೇಳುವ ಬಗ್ಗೆ ವಿದ್ಯಾರ್ಥಿಗಳ ಪ್ರವೃತ್ತಿ ಪರೀಕ್ಷೆಗೆ.
  2. ನಾವು ಅಳೆಯುವ ಸಾಧನೆಗೆ ಅನುಗುಣವಾಗಿ ವಿದ್ಯಾರ್ಥಿಗಳ ನಂಬಲರ್ಹ ಶ್ರೇಣಿ ಪಟ್ಟಿಯನ್ನು ಪಡೆಯುವ ಬಗ್ಗೆ.
  3. ಇತರರಿಗಿಂತ ಹೆಚ್ಚಾಗಿ ಪಾಠ ಪ್ರವಚನಗಳನ್ನು ಅಗತ್ಯಾಂಶಗಳಲ್ಲಿ ಪ್ರಾವಿಣ್ಯತೆ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲಿಕ್ಕೆ.
  4. ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಬಂದ ಅರ್ಜಿದಾರರಲ್ಲಿ ಅತೀ ಉತ್ತಮರನ್ನು ಆಯ್ಕೆ ಮಾಡಿಕೊಳ್ಳಲು.
  5. ಇತರರ ಕಾರ್ಯಕ್ರಮಗಳಿಗೆ ಹೋಲಿಸಿದಾಗ ಒಂದು ಕಾರ್ಯಕ್ರಮ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳಲು.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ):

       ಮೌಲ್ಯಮಾಪನವನ್ನು ಬೋಧನಾ-ಕಲಿಕೆಯ ಪೂರ್ಣ ಕಾರ್ಯ ವಿಧಾನದ ಅವಿಭಾಜ್ಯ ಅಂಗವನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ ಮತ್ತು ವ್ಯಾಸಂಗಿಕ ಹಾಗೂ ವ್ಯಾಸಂಗಿಕವಲ್ಲದ ಕ್ಷೇತ್ರಗಳೆರಡರಲ್ಲೂ ಕಲಿಯುವವನ ಸರ್ವಾಂಗಿಣ ಅಭಿವೃದ್ದಿಗಾಗಿ ಎಲ್ಲಾ ಮೂರು ಕ್ಷೇತ್ರಗಳಿಗೆ ಗಮನ ಕೊಡುವುದರ ಮೂಲಕ ಪರೀಕ್ಷೆಯನ್ನು ವ್ಯಾಪಕಗೊಳಿಸುವುದು ಅವಶ್ಯಕವಾಗಿದೆ. ಸಾಂಪ್ರದಾಯಿಕ ಪರೀಕ್ಷೆ ಕೇವಲ ವ್ಯಾಸಂಗಿಕ ಕ್ಷೇತ್ರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಿವುದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗಮನ ಮತ್ತು ಪ್ರಯತ್ನಗಳು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ವ್ಯಾಸಂಗಿಕವಲ್ಲದ ಕ್ಷೇತ್ರಗಳ ಅಭಿವೃದ್ದಿಗೂ ಸಹ ಸಾಕಷ್ಟು ಒತ್ತು ಕೊಡುವುದರ ಮೂಲಕ ಈ ಕೊರತೆಯನ್ನುತುಂಬುವ ಗುರಿ ಹೊಂದಿದೆ. ಈ ರೀತಿ ಅದು ಕಲಿಯುವವನಲ್ಲಿ ಅಪೇಕ್ಷಿತ ಸಾಮರ್ಥ್ಯಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ.

         ಮೌಲ್ಯಮಾಪನ ನಿರಂತರ ಹಾಗೂ ಸಮಗ್ರವಾಗಿರಬೇಕಾದರೆ ಮೊದಲು ಅದು ಉದ್ದೇಶಾಧಾರಿತವಾಗಿರಬೇಕು.

    ನಾವು ಶಾಲೆಗಳಲ್ಲಿ ಕೈಗೊಳ್ಳುವ ಮೌಲ್ಯಮಾಪನ ಉದ್ದೇಶಾಧಾರಿತವಾಗಿರಬೇಕು. ಈ ಶೈಕ್ಷಣಿಕ ಉದ್ದೇಶಗಳನ್ನು ಪರಿಸರ, ಸಾಮಾಜಿಕ ಮತ್ತು ರಾಜಕೀಯ ಪದ್ಧತಿ, ಜ್ಞಾನಾತ್ಮಕ ಅಭಿವೃದ್ದಿ, ಸಾಂಸ್ಕೃತಿಕ ಪರಂಪರೆ, ರಾಷ್ರೀಯ ಅವಶ್ಯಕತೆಗಳು ಮತ್ತು ಆಕಾಂಶೆಗಳಿಂದ ಪಡೆಯಬೇಕಾಗುತ್ತದೆ. ಅವುಗಳ ಸ್ವಭಾವದಿಂದಾಗಿ ಅಂತಹ ಉದ್ದೇಶಗಳನ್ನು ವ್ಯಾಸಂಗಿಕ ಯೋಜನೆಗೆ ಸೀಮಿತಗೊಳಿಸಲಾಗದು. ಅವು ಸ್ವಾಭಾವಿಕವಾಗಿ ಕಲಿಯುವವನ ಪೂರ್ಣ ವ್ಯಕ್ತಿತ್ವವನ್ನು ಒಳಗೊಳ್ಳುತ್ತವೆ, ಅಂದರೆ ವ್ಯಾಸಂಗಿಕ ಹಾಗೂ ವ್ಯಾಸಂಗಿಕವಲ್ಲದ ಕ್ಷೇತ್ರಗಳೆರಡರಲ್ಲಿನ ಬೆಳವಣಿಗೆ, ವ್ಯಾಸಂಗಿಕ ಕ್ಷೇತ್ರಗಳಲ್ಲಿನ ಸಾಧನೆ, ವ್ಯಕ್ತಿತ್ವ ಮತ್ತು ಸಾಮಾಜಿಕ ಗುಣಗಳಲ್ಲಿನ ಬೆಳವಣಿಗೆ, ಅಭಿರುಚಿ, ಮನೋಭಾವಗಳು ಮತ್ತು ಕೌಶಲ್ಯಗಳು ಇವೆಲ್ಲಾ ಶಿಕ್ಷಣದ ಪ್ರಮುಖ ಉದ್ದೇಶಗಳಾಗಿವೆ.

  ನಿರಂತರ ಮೌಲ್ಯಮಾಪನ:

      ಒಂದು ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಉದ್ದೇಶಗಳ ಸಾಧನೆಯನ್ನು ತಿಳಿಯಲು ಸತತವಾಗಿ ಕೈಗೊಳ್ಳುವ ಪರೀಕ್ಷೆಯನ್ನು ನಿರಂತರ ಮೌಲ್ಯಮಾಪನ ಎಂದು ಕರೆಯಲಾಗುತ್ತದೆ.

   ಉದಾ: ಯಾವುದಾದರೂಂದು ಕೋರ್ಸಿನ ಪ್ರಗತಿ.

          ವರ್ಷದ ಕೊನೆಗೆ ಪರೀಕ್ಷೆಯನ್ನು ಏರ್ಪಾಡು ಮಾಡುವುದು ಮತ್ತು ಮುಂಬಡ್ತಿಯ ಉದ್ದೇಶಕ್ಕಾಗಿ ಫಲಿತಾಂಶವನ್ನು ಬಳಸುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಈ ಪರಿಪಾಠದ ಕೆಲವು ಅನಪೇಕ್ಷಿತ ಫಲಿತಾಂಶಗಳು ನಮಗೆ ತಿಳಿದಿವೆ. ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸುವುದು ಆಯ್ದ ಅಭ್ಯಾಸ ಮತ್ತು ಕೊನೇ ಗಳಿಗೆಯ ಅಭ್ಯಾಸಕ್ಕೆ ದಾರಿ ಮಾಡಿಕೊಡುತ್ತದೆ. ಮೌಲ್ಯಮಾಪನ ಒಂದು ನಿರಂತರ ಪ್ರಕ್ರಿಯೆಯಾಗಬೇಕು, ನಿರಂತರ ಮೌಲ್ಯಮಾಪನದ ಮೂಲಕ ಮಕ್ಕಳ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಬಗ್ಗೆ ಅಮೂಲ್ಯ ಆಧಾರಾಂಶಗಳನ್ನು ಕ್ರಮಬದ್ದವಾಗಿ ಪಡೆಯಲು ಸಾಧ್ಯವಾಗುತ್ತದೆ. ಅಪೇಕ್ಷಿತ ಬೆಳಬಣಿಗೆ ಮತ್ತು ಮಗುವಿನ ವ್ಯಕ್ತಿತ್ವದ ವಿವಿಧ ಅಂಶಗಳ ಅಭಿವೃದ್ದಿಯಲ್ಲಿ ಬಹಿರಂಗವಾಗಿ ತಿಳಿಸಿದ ಉದ್ದೇಶಗಳನ್ನು ಸಾಧಿಸುವ ದೃಷ್ಟಿಯಿಂದ ಪರಿಹಾರಾತ್ಮಕ ಮತ್ತು ಸಂಪದೀಕರಣಗೊಳಿಸಿದ ಬೋಧನೆಯನ್ನು ಒದಗಿಸುವಲ್ಲಿ ಇದು ಸಹಾಯಕವಾಗುವುದು. ಮರುಪುಷ್ಟಿಯು ವಿದ್ಯಾರ್ಥಿಗಳಲ್ಲಿ ಸಾಧನೆಯ ಮಟ್ಟ ಮತ್ತು ನೈಪುಣ್ಯತೆಯನ್ನು ಸುಧಾರಿಸುವಲ್ಲಿ ಶಿಕ್ಷಕರಿಗೆ ನೆರವಾಗುವುದು. ಮೌಲ್ಯಮಾಪನವನ್ನು ಬೋಧನೆಯ ಪೂರ್ವದಲ್ಲಿ, ಬೋಧನಾ ಅವಧಿಯಲ್ಲಿ ಮತ್ತು ಬೋಧನೆಯ ನಂತರ ಮಾಡುವ ಮೂಲಕ ಮೌಲ್ಯಮಾಪನವನ್ನು ನಿರಂತರವಾಗಿಸಬೇಕು. ಮೌಲ್ಯಮಾಪನ ನಿರಂತರವಾಗಿದ್ದಾಗ ಮತ್ರ ವಿದ್ಯಾರ್ಥಿಗಳ ವರ್ತನೆಯಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ಈಗ ಶಾಲಾ ಶಿಕ್ಷಣದಲ್ಲಿ ಜಾರಿಯಲಿರುವಂತಹ ಸೆಮಿಸ್ಟರ್‌ ಪದ್ದತಿಯಲ್ಲಿ ನಿರಂತರ ಮೌಲ್ಯಮಾಪನ ಪದ್ದತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.

ವ್ಯಾಪಕ/ಸಮಗ್ರ ಮೌಲ್ಯಮಾಪನ:

        ಒಂದು ವಿಷಯಕ್ಕೆ ಸಂಬಂಧಿಸಿದಂತೆ, ಉದ್ದೇಶಿತ ಸಮಗ್ರ ಪರೀಕ್ಷೆಯನ್ನು ವ್ಯಾಪಕ ಮೌಲ್ಯಮಾಪನ ಎನ್ನುವರು. ಅದು ಒಂದು ವರ್ಗದ ವಿಷಯಕ್ಕೆ ಅಥವಾ ಉದ್ದೇಶಿತ ಬುದ್ಧಿ ಪರೀಕ್ಷಣ ಕೂಡ ಆಗಿರಬಹುದು.

ಉದಾ: ಅಭ್ಯರ್ಥಿಯ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸುವುದಿದ್ದರೆ ಕೇವಲ ಭಾಷಾ ಪರೀಕ್ಷೆ ಆಗಿರಬಹುದು.

      ಮೌಲ್ಯಮಾಪನದ ಸಾಂಪ್ರದಾಯಿಕ ಪದ್ದತಿಯ ಮುಖ್ಯ ಕೊರತೆಗಳಲ್ಲಿ ಒಂದೆಂದರೆ ಅದರ ವ್ಯಾಪಕತೆಯು ವ್ಯಾಸಂಗಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದು. ವ್ಯಾಸಂಗಿಕವಲ್ಲದ ಅಂಶಗಳನ್ನು ಸಾಧಿಸಲು ಪ್ರಯತ್ನಿಸುತ್ತಿಲ್ಲ, ಬೋಧನೆಯ ಎಲ್ಲಾ ಪ್ರಯತ್ನಗಳೂ ವ್ಯಾಸಂಗಿಕ ಕ್ಷೇತ್ರಕ್ಕೆ ಕೇಂದ್ರೀಕರಿಸಲ್ಫಟ್ಟಿವೆ. ನಾವು ವ್ಯಾಸಂಗಿಕ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೇವೆ. ಅದರ ಪರಿಣಾಮ ಮಕ್ಕಳ ಸರ್ವಾಂಗಿಣ ಅಭಿವೃದ್ದಿಯ ಉದ್ದೇಶವಿದ್ದಾಗಲೂ ಸಹ ಶಿಕ್ಷಣವು ಬೌದ್ದಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ಕಲಿಯುವವನ ವ್ಯಕ್ತಿತ್ವದ ಸಮಗ್ರ ಅಭಿವೃದ್ದಿಯ ಉದ್ದೇಶವು ಈಡೇರದೆ ಉಳಿಯುವುದು.

       ಬೌದ್ದಿಕವಲ್ಲದ ಕ್ಷೇತ್ರಗಳಲ್ಲಿ ಮಕ್ಕಳ ಅಭಿವೃದ್ದಿಯನ್ನು ಪ್ರೋತ್ಸಾಹಿಸುವಂತಹ ಹಲವು ಕ್ಷೇತ್ರಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದನ್ನು ನಾವು ಕಾಣುತ್ತೇವೆ. ಉದಾ: ಆರೋಗ್ಯ ಮತ್ತು ದೈಹಿಕ ಶಿಕ್ಷಣ, ಸಾಮಾಜಿಕ ಉಪಯೋಗಿ ಉತ್ಪಾದನಾ ಕಾರ್ಯ, ಕಲಾ ಶಿಕ್ಷಣ, ಸಂಗೀತ ಇತ್ಯಾದಿ, ಬೌದ್ದಿಕವಲ್ಲದ ಕ್ಷೇತ್ರಗಳಲ್ಲಿನ ಉದ್ದೇಶಗಳು ಇತರೇ ಶಾಲಾ ವಿಷಯಗಳು ಮತ್ತು ವಿಶೇಷವಾಗಿ ಯೋಜಿಸಿದ ಸಹಪಠ್ಯ ಚಟುವಟಿಕೆಗಳ ಮೂಲಕವೂ ಸಾಧಿಸಲ್ಫಡುತ್ತದೆ. ವ್ಯಾಸಂಗಿಕವಲ್ಲದ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಯ ಬೆಳವಣಿಗೆಯನ್ನು ಸತತವಾಗಿ ಅಳೆಯಬೇಕು ಮತ್ತು ಸಲಹೆ ನೀಡಬೇಕು. ಇದನ್ನು ಒಂದು ಪರೀಕ್ಷೆಯಂತೆ ಸಂಘಟಿಸಬಾರದು.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಉದ್ದೇಶ:

  1. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಒಂದು ಪ್ರದೇಶದ ಸಾಮಾಜಿಕ, ರಾಜಕೀಯ ವ್ಯವಸ್ಥೆ ಮತ್ತು ಆರ್ಥಿಕ ವಿನ್ಯಾಸ ಮನೋವೈಜ್ಞಾನಿಕ ಪಕ್ವತೆ, ಸಂಸ್ಕೃತಿ, ರಾಷ್ಟ್ರೀಯ ಅಗತ್ಯ ಮತ್ತು ಪ್ರಸ್ತುತ ಜ್ಞಾನ, ಶಿಕ್ಷಣದ ಅಗತ್ಯವನ್ನು ನಿರ್ಧರಿಸುವುದು.
  2. ಕಲಿಕೆ ಮತ್ತು ಬೋಧನೆಯ ವಸ್ತುಗಳನ್ನು ವಿಸ್ತಾರವಾದ ತಳಹದಿಯ ಮೇಲೆ ರೂಪಿಸಬೇಕಾಗಿದೆ.
  3. ವಿದ್ಯಾರ್ಥಿಗಳನ್ನು ಈ ವಸ್ತುಸ್ಥಿತಿಗೆ ಒಳಪಡಿಸಿದ ಮೇಲೆ ಅವು ಎಷ್ಟರ ಮಟ್ಟಿಗೆ ಸಾಕಾರಗೊಂಡಿವೆ ಎಂದು ಪರೀಕ್ಷಿಸಬೇಕಾಗುತ್ತದೆ.
  4. ನಿರೀಕ್ಷೆಗಿಂತ ಹಿಂದೆ ಬಿದ್ದಾಗ ಕಲಿಕೆ ಬೋಧನೆಯಲ್ಲಿನ ನ್ಯೂನತೆಗಳನ್ನು ಗುರುತಿಸಿ ಜ್ಞಾನದ ಒಳ ಅರಿವಿನ ಕ್ಷಮತೆಯನ್ನು ಹೆಚ್ಚಿಸಬೇಕು.
  5. ಮೌಲ್ಯಮಾಪನವನ್ನು ಅಪೇಕ್ಷಿತ ಮಟ್ಟಕ್ಕೆ ಕೊಂಡೊಯ್ಯಲು ನಿರಂತರ ಪುನರ್ವಿಮರ್ಶೆಗೆ ಒಳಪಡಿಸಿ ಮೌಲ್ಯಮಾಪನವನ್ನು ಉದ್ದೇಶಪೂರ್ವಕವಾಗಿ ಸಾಗಿಸಬೇಕು.

 

ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದ ಮಹತ್ವ:

  1. ವಿದ್ಯಾರ್ಥಿಯ ಬೆಳವಣಿಗೆ ಮತ್ತು ವಿಕಾಸದ ಸಂಪೂರ್ಣವಾದ ಚಿತ್ರವನ್ನು ತಿಳಿಸುತ್ತದೆ.
  2. ಪಾಲಕರಿಗೆ ಅರ್ಥಪೂರ್ಣ ಪ್ರಗತಿಯ ವರದಿಯನ್ನು ಒದಗಿಸುತ್ತದೆ.
  3. ಬೋಧಕರಿಗೆ ಯುಕ್ತ ಮಾರ್ಪಾಡು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  4. ಇದು ವಿದ್ಯಾರ್ಥಿಗೆ ಅವನ ಪರಿಶ್ರಮದ ಪರಿಣಾಮವನ್ನು ಮತ್ತು ಕಲಿಕೆಗೆ ಗುಣಾವಗುಣಗಳನ್ನು ನಿರಂತರವಾಗಿ ತೋರಿಸುವುದರಿಂದ, ಆತನ ಮುಂದಿನ ಕಲಿಕೆಗೆ ಅದು ಹೆಚ್ಚಿನ ಪ್ರೇರಕವಾಗುತ್ತದೆ.
  5. ಮೌಲ್ಯಮಾಪನದಿಂದ ಒಬ್ಬ ವಿದ್ಯಾರ್ಥಿಯ ಶಕ್ತಿ ಸಾಮರ್ಥ್ಯಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗುವುದು.

ಶ್ರೇಣಿ ಪದ್ದತಿ

    ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಶ್ರೇಣಿಗಳ ಮೂಲಕ (       ) ಎಂದು ಸೂಚಿಸುವುದೇ ಶ್ರೇಣಿ ಪದ್ದತಿಯಾಗಿದೆ.

ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ- ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಂಕಗಳ ಬದಲಾಗಿ ಶ್ರೇಣಿಗಳಿಂದ ನಿರ್ಧರಿಸುವುದಕ್ಕೆ ಶ್ರೇಣಿ ನೀಡುವಿಕೆ ಎನ್ನುತ್ತಾರೆ.

ಉದಾ: ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು.

ವ್ಯಾಖ್ಯಾನ:

     ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು ಪ್ರಕಾರ –“ಸೃಷ್ಠಿಸಿದ ಪ್ರಮಾಣಗಳನ್ನು ಅನುಸರಿಸಿ ಶಿಕ್ಷಕರು ವಿದ್ಯಾರ್ಥಿಯ ಅಭಿವೃದ್ದಿ ಅಥವಾ ಸಾಧನೆಯನ್ನು ಮೌಲ್ಯೀಕರಿಸಿ ಕಟ್ಟುವ ಕಾರ್ಯನಿರ್ಣಯದಲ್ಲಿ ಅನುಸರಿಸುವ ವಿಧಾನವಾಗಿದೆ. ಇದನ್ನೇ ಅಂಕನ ಪದ್ದತಿ ಎಲ್ಲವೇ ಸ್ಥಾನ ನಿರ್ದೇಶನ ಎಂದು ಕರೆಯಲಾಗಿದೆ.

ಶ್ರೇಣಿ ಪದ್ದತಿಯ ಮಹತ್ವ:   

  1. ವಿದ್ಯಾರ್ಥಿ ಕಲಿತ ವಿಷಯಾಧಾರಿತ ಆಧಾರದ ಮೇಲೆ ಶಾಲೆಯಲ್ಲಿ ಸೂಕ್ತವಾದ ದರ್ಜೆ ನೀಡುವುದು.
  2. ವಿದ್ಯಾರ್ಥಿಗೆ ನಿಗದಿ‍ಪಡಿಸಿದ ವಿಷಯದಲ್ಲಿ ದರ್ಜೆ ನೀಡುವುದು.
  3. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗೆರೆಕೊರೆದಂತೆ ಶ್ರೇಣಿಗಳ ಮೂಲಕ ಸೂಚಿಸುವುದು.
  4.   ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು.

  ಶ್ರೇಣಿ ಪದ್ದತಿಯ:

  

ಅಂಕಗಳ ವ್ಯಾಪ್ತಿ

ಶ್ರೇಣಿ

ಶ್ರೇಣಿ ಅಂಶಗಳು

91 – 100

A1

10.00

81 - 90

A2

9.0

71 – 80

B1

8.0

61 - 70

B2

7.0

51 – 60

C1

6.0

41 - 50

C2

5.0

33 – 40

D

4.0

21 - 32

E1

 

00 - 20

E2

 

 

 

 

Comments

Popular posts from this blog

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)

ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು