Posts

ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು

  ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು ಆನ್ ಲೈನ್‌ ಪರೀಕ್ಷೆಗಳು:         ಆನ್‌ ಲೈನ್‌ ಪರೀಕ್ಷೆಗಳು ಇಂದಿನ ಡಿಜಿಟಲ್‌ ಯುಗದಲ್ಲಿ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಆನ್‌ ಲೈನ್‌ ಪರೀಕ್ಷೆಯು ಇಂಟರ್ನೆಟ್‌ ಮತ್ತು ಗಣಕಯಂತ್ರ ಅಥವಾ ಮೊಬೈಲ್‌ ಬಳಸಿ ನಡೆಸುವ ಒಂದು ಆಧುನಿಕ ಮೌಲ್ಯಮಾಪನ ವಿಧಾನವಾಗಿದೆ. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗುವ ಬದಲು, ತಮಗೆ ಅನುಕೂಲಕರವಾದ ಸ್ಥಳದಲ್ಲಿ ಕುಳಿತು ಕಂಪ್ಯೂಟರ್‌ ಮೂಲಕ ಪರೀಕ್ಷೆ ಬರೆಯುತ್ತಾರೆ. ಇದನ್ನು ಸಿ.ಬಿ.ಟಿ (ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್)‌ ಎಂದು ಕರೆಯುತ್ತಾರೆ. ಆನ್‌ ಲೈನ್‌ ಪರೀಕ್ಷೆಯ ಉದ್ದೇಶಗಳು: 1.      ಸಮಯದ ಉಳಿತಾಯ: ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವುದು, ಮುದ್ರಿಸುವುದು ಮತ್ತು ವಿತರಿಸುವ ಸಮಯವನ್ನು ಇದು ಉಳಿಸುತ್ತದೆ. ಪರೀಕ್ಷೆ ಮುಗಿದ ತಕ್ಷಣ ಅಥವಾ ಅತಿ ಶೀಘ್ರದಲ್ಲಿ ಫಲಿತಾಂಶವನ್ನು ಪಡೆಯಬಹುದು. 2.      ಪಾರದರ್ಶಕತೆ ಮತ್ತು ನಿಖರತೆ: ಕಂಪ್ಯೂಟರ್‌ ಆಧಾರಿತ ಮೌಲ್ಯಮಾಪನ ಮಾಡುವುದರಿಂದ ಮಾನವ ತಪ್ಪುಗಳಿಗೆ/ದೋಷಗಳಿಗೆ ಅವಕಾಶವಿರುವುದಿಲ್ಲ. ಮೌಲ್ಯಮಾಪನವು ಅತ್ಯಂತ ನಿಖರವಾಗಿ ಮತ್ತು ಪಕ್ಷಪಾತವಿಲ್ಲದೆ ನಡೆಯುತ್ತದೆ. 3.      ವೆಚ್ಚ ಕಡಿಮೆ ಮಾಡುವುದು: ಕಾಗದದ ಬಳಕೆ ಇಲ್ಲದಿರುವುದರಿಂದ ಮುದ್ರಣ ವೆಚ್ಚ ಮತ್ತು...

ಸಾಧನಾ ಪರೀಕ್ಷೆಗಳು

Image
  ಸಾಧನಾ ಪರೀಕ್ಷೆಗಳು     ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳನ್ನು ಪರಿಹರಿಸಲು ತಿಳಿಸಿ ಅಥವಾ ನಿರ್ದಿಷ್ಟ ಕಾರ್ಯ ನಿರ್ವಹಿಸಲು ತಿಳಿಸಿ ಇದರ ಮೂಲಕ ವಿದ್ಯಾರ್ಥಿಯು ಗುರಿ / ಉದ್ದೇಶಗಳನ್ನು ಎಷ್ಟರ ಮಟ್ಟಿಗೆ ಸಾಧಿಸಿದ್ದಾನೆ ಎಂಬುದನ್ನು ನಿರ್ಧರಿಸುವುದಕ್ಕೆ ಸಾಧನಾ ಪರೀಕ್ಷೆ ಎನ್ನುವರು. ವ್ಯಾಖ್ಯಾನಗಳು:      “ಸಾಧನೆಯ ಪರೀಕ್ಷೆಯೆಂದರೆ ವಿದ್ಯಾರ್ಥಿಯು ನಿರ್ದಿಷ್ಟ ಕ್ಷೇತ್ರದಲ್ಲಿ ಹೊಂದಿರುವ ಜ್ಞಾನ ಅಥವಾ ನಿರ್ದಿಷ್ಟ ಕೌಶಲ್ಯಗಳಲ್ಲಿ ಹೊಂದಿರುವ ಸಾಮರ್ಥ್ಯವನ್ನು ಅಳೆಯಲು ರೂಪಿಸಿರುವ ಪರೀಕ್ಷೆ.” --- ಇಬೆಲ್      “ಶೈಕ್ಷಣಿಕ ಸಾಧನೆಯ ಪರೀಕ್ಷೆಯೆಂದರೆ ನಿರ್ದಿಷ್ಟ ವಿದ್ಯಾರ್ಥಿ ಅಥವಾ ಒಂದು ಗುಂಪಿನ ವಿದ್ಯಾರ್ಥಿಗಳ ಜ್ಞಾನ, ಗ್ರಹಿಕೆ ಹಾಗೂ ಕೌಶಲ್ಯಗಳನ್ನು ಅಳೆಯಲು ರೂಪಿಸಿರುವ ಪರೀಕ್ಷೆಯಾಗಿದೆ.”   ------- ಫ್ರೀಮನ್ ‌ಸಾಧನೆಯ ಪರೀಕ್ಷೆಯ ಉಪಯೋಗಗಳು ವಿದ್ಯಾರ್ಥಿಗಳ ಕಾರ್ಯ ಸಾಧನಾ ಸಾಮರ್ಥ್ಯವನ್ನು ಪರೀಕ್ಷಿಸಲು ಬಳಸಲಾಗುವುದು. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಇವುಗಳ ಸಹಾಯದಿಂದ ವಿದ್ಯಾರ್ಥಿಗಳ ಸ್ಥಾನ ನಿಗದಿಗೊಳಿಸಲು ಮತ್ತು ವರ್ಗೀಕರಿಸಲು ಸಾಧ್ಯವಾಗುತ್ತದೆ. ಸಾಧನೆಯ ಪರೀಕ್ಷೆಗಳು ಸಲಹೆ ನೀಡಲು ಉತ್ತಮ ಸಾಧನಗಳಾಗಿವೆ, ಶ್ರೇಣಿಗಳನ್ನು ನೀಡಲು ಸಹಾಯಕವಾಗಿವೆ. ಪರಿ...