ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು
ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು ಆನ್ ಲೈನ್ ಪರೀಕ್ಷೆಗಳು: ಆನ್ ಲೈನ್ ಪರೀಕ್ಷೆಗಳು ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಆನ್ ಲೈನ್ ಪರೀಕ್ಷೆಯು ಇಂಟರ್ನೆಟ್ ಮತ್ತು ಗಣಕಯಂತ್ರ ಅಥವಾ ಮೊಬೈಲ್ ಬಳಸಿ ನಡೆಸುವ ಒಂದು ಆಧುನಿಕ ಮೌಲ್ಯಮಾಪನ ವಿಧಾನವಾಗಿದೆ. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗುವ ಬದಲು, ತಮಗೆ ಅನುಕೂಲಕರವಾದ ಸ್ಥಳದಲ್ಲಿ ಕುಳಿತು ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯುತ್ತಾರೆ. ಇದನ್ನು ಸಿ.ಬಿ.ಟಿ (ಕಂಪ್ಯೂಟರ್ ಬೇಸ್ಡ್ ಟೆಸ್ಟ್) ಎಂದು ಕರೆಯುತ್ತಾರೆ. ಆನ್ ಲೈನ್ ಪರೀಕ್ಷೆಯ ಉದ್ದೇಶಗಳು: 1. ಸಮಯದ ಉಳಿತಾಯ: ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವುದು, ಮುದ್ರಿಸುವುದು ಮತ್ತು ವಿತರಿಸುವ ಸಮಯವನ್ನು ಇದು ಉಳಿಸುತ್ತದೆ. ಪರೀಕ್ಷೆ ಮುಗಿದ ತಕ್ಷಣ ಅಥವಾ ಅತಿ ಶೀಘ್ರದಲ್ಲಿ ಫಲಿತಾಂಶವನ್ನು ಪಡೆಯಬಹುದು. 2. ಪಾರದರ್ಶಕತೆ ಮತ್ತು ನಿಖರತೆ: ಕಂಪ್ಯೂಟರ್ ಆಧಾರಿತ ಮೌಲ್ಯಮಾಪನ ಮಾಡುವುದರಿಂದ ಮಾನವ ತಪ್ಪುಗಳಿಗೆ/ದೋಷಗಳಿಗೆ ಅವಕಾಶವಿರುವುದಿಲ್ಲ. ಮೌಲ್ಯಮಾಪನವು ಅತ್ಯಂತ ನಿಖರವಾಗಿ ಮತ್ತು ಪಕ್ಷಪಾತವಿಲ್ಲದೆ ನಡೆಯುತ್ತದೆ. 3. ವೆಚ್ಚ ಕಡಿಮೆ ಮಾಡುವುದು: ಕಾಗದದ ಬಳಕೆ ಇಲ್ಲದಿರುವುದರಿಂದ ಮುದ್ರಣ ವೆಚ್ಚ ಮತ್ತು...