Posts

Showing posts from October, 2024

ಶ್ರೇಣಿ ಪದ್ದತಿ

  ಶ್ರೇಣಿ ಪದ್ದತಿ     ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಶ್ರೇಣಿಗಳ ಮೂಲಕ  ಎಂದು(A,A+,B,B+ ಇತ್ಯಾದಿ )  ಸೂಚಿಸುವುದೇ ಶ್ರೇಣಿ ಪದ್ದತಿಯಾಗಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ- ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಂಕಗಳ ಬದಲಾಗಿ ಶ್ರೇಣಿಗಳಿಂದ ನಿರ್ಧರಿಸುವುದಕ್ಕೆ ಶ್ರೇಣಿ ನೀಡುವಿಕೆ ಎನ್ನುತ್ತಾರೆ. ಉದಾ: ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು. ವ್ಯಾಖ್ಯಾನ:      ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು ಪ್ರಕಾರ –“ ಸೃಷ್ಠಿಸಿದ ಪ್ರಮಾಣಗಳನ್ನು ಅನುಸರಿಸಿ ಶಿಕ್ಷಕರು ವಿದ್ಯಾರ್ಥಿಯ ಅಭಿವೃದ್ದಿ ಅಥವಾ ಸಾಧನೆಯನ್ನು ಮೌಲ್ಯೀಕರಿಸಿ ಕಟ್ಟುವ ಕಾರ್ಯನಿರ್ಣಯದಲ್ಲಿ ಅನುಸರಿಸುವ ವಿಧಾನವಾಗಿದೆ. ಇದನ್ನೇ ಅಂಕನ ಪದ್ದತಿ ಎಲ್ಲವೇ ಸ್ಥಾನ ನಿರ್ದೇಶನ ಎಂದು ಕರೆಯಲಾಗಿದೆ. ಶ್ರೇಣಿ ಪದ್ದತಿಯ ಮಹತ್ವ:    ವಿದ್ಯಾರ್ಥಿ ಕಲಿತ ವಿಷಯಾಧಾರಿತ ಆಧಾರದ ಮೇಲೆ ಶಾಲೆಯಲ್ಲಿ ಸೂಕ್ತವಾದ ದರ್ಜೆ ನೀಡುವುದು. ವಿದ್ಯಾರ್ಥಿಗೆ ನಿಗದಿ‍ಪಡಿಸಿದ ವಿಷಯದಲ್ಲಿ ದರ್ಜೆ ನೀಡುವುದು. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗೆರೆಕೊರೆದಂತೆ ಶ್ರೇಣಿಗಳ ಮೂಲಕ ಸೂಚಿಸುವುದು.     ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ...

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)

  ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ):         ಮೌಲ್ಯಮಾಪನವನ್ನು ಬೋಧನಾ-ಕಲಿಕೆಯ ಪೂರ್ಣ ಕಾರ್ಯ ವಿಧಾನದ ಅವಿಭಾಜ್ಯ ಅಂಗವನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ ಮತ್ತು ವ್ಯಾಸಂಗಿಕ ಹಾಗೂ ವ್ಯಾಸಂಗಿಕವಲ್ಲದ ಕ್ಷೇತ್ರಗಳೆರಡರಲ್ಲೂ ಕಲಿಯುವವನ ಸರ್ವಾಂಗಿಣ ಅಭಿವೃದ್ದಿಗಾಗಿ ಎಲ್ಲಾ ಮೂರು ಕ್ಷೇತ್ರಗಳಿಗೆ ಗಮನ ಕೊಡುವುದರ ಮೂಲಕ ಪರೀಕ್ಷೆಯನ್ನು ವ್ಯಾಪಕಗೊಳಿಸುವುದು ಅವಶ್ಯಕವಾಗಿದೆ. ಸಾಂಪ್ರದಾಯಿಕ ಪರೀಕ್ಷೆ ಕೇವಲ ವ್ಯಾಸಂಗಿಕ ಕ್ಷೇತ್ರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಿವುದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗಮನ ಮತ್ತು ಪ್ರಯತ್ನಗಳು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ವ್ಯಾಸಂಗಿಕವಲ್ಲದ ಕ್ಷೇತ್ರಗಳ ಅಭಿವೃದ್ದಿಗೂ ಸಹ ಸಾಕಷ್ಟು ಒತ್ತು ಕೊಡುವುದರ ಮೂಲಕ ಈ ಕೊರತೆಯನ್ನುತುಂಬುವ ಗುರಿ ಹೊಂದಿದೆ. ಈ ರೀತಿ ಅದು ಕಲಿಯುವವನಲ್ಲಿ ಅಪೇಕ್ಷಿತ ಸಾಮರ್ಥ್ಯಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ.            ಮೌಲ್ಯಮಾಪನ ನಿರಂತರ ಹಾಗೂ ಸಮಗ್ರವಾಗಿರಬೇಕಾದರೆ ಮೊದಲು ಅದು ಉದ್ದೇಶಾಧಾರಿತವಾಗಿರಬೇಕು.     ನಾವು ಶಾಲೆಗಳಲ್ಲಿ ಕೈಗೊಳ್ಳುವ ಮೌಲ್ಯಮಾಪನ ಉದ್ದೇಶಾಧಾರಿತವಾಗಿರಬೇಕು. ಈ ಶೈಕ್ಷಣಿಕ ಉದ್ದೇಶಗಳನ್ನು ಪರಿಸರ, ಸಾಮಾಜಿಕ ಮತ್ತು ರಾಜಕೀಯ ಪದ್ಧತಿ, ಜ್ಞಾನಾತ್ಮಕ ಅಭಿವೃ...