ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು

 

ಕಲಿಕಾ ಮಾಪನ (Assessment of Learning)

1.1: ಮಾಪನದ ಅರ್ಥ:

Ø  ಕಲಿಕಾ ಕಾರ್ಯಕ್ರಮಗಳ ಸಂಸ್ಕರಿಸಲು, ವಿದ್ಯಾರ್ಥಿಗಳ ಕಲಿಕೆಯ ಮೇಲಿನ ಪ್ರಾಯೋಗಿಕ ದತ್ತಾಂಶಗಳ ಬಳಕೆಯನ್ನು ಮಾಪನವು ಒಳಗೊಂಡಿರುತ್ತದೆ.

Ø  ಇದು ವಿದ್ಯಾರ್ಥಿಗಳು ಖಚಿತವಾದ ಒಂದು ಮಟ್ಟವನ್ನು ತಲುಪಲು ಸಹಾಯ ಮಾಡುತ್ತದೆ.

Ø  ಮಾಪನದ ದತ್ತಾಂಶವನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕಾ ನಿರ್ವಹಣೆಯಲ್ಲಿಯ ಬಲ ಮತ್ತು ದೌರ್ಬಲ್ಯವನ್ನು ಗುರ್ತಿಸುತ್ತದೆ ಹಾಗೂ ಬೋಧನಾ ಮತ್ತು ಕಲಿಕೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ವ್ಯಾಖ್ಯಾನ:

            “ಮಾಪನವು, ವಿದ್ಯರ್ಥಿಗಳ ಕಲಿಕೆ ಮತ್ತು ಅಭಿವೃದ್ಧಿಯ ಸಂಬಂಧ ತೀರ್ಮಾನಗಳನ್ನು ಕೈಗೊಳ್ಳಲು ಇರುವ ಒಂದು ವ್ಯವಸ್ಥಿತ ಆಧಾರವಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆ ಮತ್ತು ಅಭಿವೃದ್ದಿಯನ್ನು ವೃದ್ದಿಸಲು ವ್ಯಾಖ್ಯಾನಿಸುವ, ಯೋಜಿಸುವ, ಸಂಗ್ರಹಿಸುವ, ವಿಶ್ಲೇಷಿಸುವ, ಅರ್ಥೈಸುವ ಮತ್ತು ಮಾಹಿತಿಯನ್ನು ಬಳಸುವ ಪ್ರಕ್ರಿಯೆಯಾಗಿದೆ.”

ಮಾಪನದ ಉದ್ದೇಶಗಳು:

  1. ವಿದ್ಯಾರ್ಥಿಯ ಕಲಿಕೆಗೆ ಸಹಾಯ ಮಾಡುವುದು.
  2. ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ಮತ್ತುದೌರ್ಬಲ್ಯವನ್ನು ಗುರ್ತಿಸುವುದು.
  3. ನಿರ್ದಿಷ್ಟ ಬೋಧನಾ ತಂತ್ರದ ಪರಿಣಾಮಕತೆಯನ್ನು ಮಾಪನ ಮಾಡುವುದು.
  4. ಪಠ್ಯಕ್ರಮ ಕಾರ್ಯಕ್ರಮಗಳ ಪರಿಣಾಮಕತೆಯನ್ನು ಮಾಪನ ಮತ್ತು ಅಭಿವೃದ್ದಿ ಪಡಿಸುವುದು.
  5. ಬೋಧನಾ ಪರಿಣಾಮಕತೆಯನ್ನು ಮಾಪನ ಮತ್ತು ಅಭಿವೃದ್ದಿ ಪಡಿಸುವುದು.
  6. ತೀರ್ಮಾನ ಕೈಗೊಳ್ಳಲು ಸಹಾಯಕವಾಗುವ ದತ್ತಾಂಶವನ್ನು ಒದಗಿಸುವುದು.
  7. ಸಂಸ್ಕೃತಿ ಆಧಾರಿತ ಬೋಧನೆಯ ಜೊತೆಗೆ ಅದನ್ನು ಒಳಗೊಂಡಂತೆ ಸಂವಹನ ಮಾಡುವುದು.

 

ಕಿರುಪರೀಕ್ಷೆ, ಅಳತೆ ಮತ್ತು ಮೌಲ್ಯಮಾಪನ:

ಕಿರುಪರೀಕ್ಷೆ:

         ಕಿರುಪರೀಕ್ಷೆ ಎಂದರೆ ವಿದ್ಯಾರ್ಥಿಯನ್ನು ಪರೀಕ್ಷಿಸಲು ನೀಡಿರುವ ಹಲವಾರು ಪ್ರಶ್ನೆಗಳು ಅಥವಾ ಕಾರ್ಯಗಳ ಒಂದು ಸಾಧನ. ಇದರ ಫಲಿತಾಂಶದಿಂದ ವಿವಿಧ ವಿದ್ಯಾರ್ಥಿಗಳ ಸಾಧನೆಯನ್ನು ಪರಿಮಾಣಾತ್ಮಕವಾಗಿ ಹೋಲಿಸಿ ನೋಡಬಹುದಾಗಿದೆ.

Ø  ಕಿರುಪರೀಕ್ಷೆಯು ವಿದ್ಯಾರ್ಥಿ ಉತ್ತರಿಸಬೇಕಾಗಿರುವ ಹಲವಾಗು ಪ್ರಶ್ನೆಗಳು ಅಥವಾ ನಿರ್ವಹಿಸಬೇಕಾಗಿರುವ ಕಾರ್ಯಗಳನ್ನು ಒಳಗೊಂಡಿದೆ.

Ø  ಇದು ವಿದ್ಯಾರ್ಥಿ ಸ್ವತಂತ್ರವಾಗಿ ನಿರ್ವಹಿಸಬೇಕಾಗಿರುವ ಕಾರ್ಯ. ಕಿರುಪರೀಕ್ಷೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಂಕಗಳ ರೂಪದಲ್ಲಿ ಅಳೆಯುತ್ತದೆ.

Ø  ಕಿರುಪರೀಕ್ಷೆ ವಿವಿಧ ವಿದ್ಯಾರ್ಥಿಗಳ ಸಾಧನೆಯನ್ನು ಪರಿಮಾಣಾತ್ಮಕವಾಗಿ ಹೋಲಿಸಲು ನೆರವಾಗುತ್ತದೆ.

Ø  ಕಿರುಪರೀಕ್ಷೆಯಲ್ಲಿ ದರ್ಜಾಮಾಪನಿಗಳು ಮತ್ತು ತಾಳೆಪಟ್ಟಿಗಳನ್ನು ಬಳಸಲಾಗುವುದಿಲ್ಲ.

ಅಳತೆ:

     ಕಿರುಪರೀಕ್ಷೆಯಲ್ಲಿ ಪರಿಣಾಮವಾಗಿ ಅಳತೆ ಸಾಧ್ಯವಾಗುತ್ತದೆ. ವೀಕ್ಷಣಾ ತಂತ್ರ, ದರ್ಜಾ ಮಾಪನಿ ಅಥವಾ ಇತರೆ ಯಾವುದೇ ಸಾಧನದಿಂದ ಪರಿಮಾಣಾತ್ಮಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದನ್ನು ಅಳತೆ ಎನ್ನುವರು.

     ಅಳತೆ ಎನ್ನುವುದು ಒಂದು ಕ್ರಿಯೆ ಅಥವಾ ಪ್ರಕ್ರಿಯೆ, ಯಾವುದನ್ನು ಅಳೆಯುತ್ತೇವೆಯೋ ಅದಕ್ಕೆ ಅಂಕಸೂಚಿಯನ್ನು ನೀಡುವುದಾಗಿದೆ. ಅಳತೆ ಎನ್ನುವುದು ಒಂದು ವಸ್ತುವಿನ ಅಥವಾ ಗುಣದ ಪರಿಮಾಣವನ್ನು ಸೂಚಿಸುತ್ತದೆ.

       ಸಾಮಾನ್ಯವಾಗಿ ವಿದ್ಯಾರ್ಥಿಗಳ ಎತ್ತರ, ತೂಕ, ವಯಸ್ಸು, ಬುದ್ದಿಶಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಮರ್ಥ್ಯವನ್ನು ಅಳೆಯುತ್ತೇವೆ. ಭೌತಿಕ ಅಳತೆ ನೇರ, ಸರಳ ಹಾಗೂ ನಿಖರವಾಗಿರುತ್ತದೆ. ಆದರೆ ಮನೋವಿಜ್ಞಾನಿಕ ಹಾಗೂ ಶೈಕ್ಷಣಿಕ ಅಳತೆಗಳು ತುಂಬಾ ಸಂಕೀರ್ಣವಾದವುಗಳು. ಕಾರಣ ಇವುಗಳನ್ನು ಭೌತಿಕ ಸಾಧನಗಳ ಮೂಲಕ ಅಳೆಯಲು ಸಾಧ್ಯವಾಗುವುದಿಲ್ಲ. ಬುದ್ದಿಶಕ್ತಿಯ ಅಳತೆಯನ್ನು ಬುದ್ದಿ ಶಕ್ತಿ ಸೂಚ್ಯಾಂಕದ ರೂಪದಲ್ಲಿ ಮತ್ತು ಶೈಕ್ಷಣಿಕ ಸಾಧನೆಯನ್ನು ಅಂಕಗಳು ಅಥವಾ ಶ್ರೇಣಿಗಳ ರೂಪದಲ್ಲಿಸೂಚಿಸುತ್ತೇವೆ.

       ಅಳತೆ ಒಂದು ಪರಿಮಾಣಾತ್ಮಕ ಪ್ರಕ್ರಿಯೆಯಾಗಿರುವುದರಿಂದ, ಅಳತೆಯ ಫಲಿತಾಂಶವನ್ನು ಅಂಕಗಳ ರೂಪದಲ್ಲಿ ವ್ಯಕ್ತಪಡಿಸುತ್ತೇವೆ.

ಅಳತೆಯ ವಿಧಗಳು:

  1. ಪ್ರತ್ಯಕ್ಷ ಅಳತೆ.
  2. ಪರೋಕ್ಷ ಅಳತೆ.
  3. ಸಾಪೇಕ್ಷ ಅಳತೆ.

          ವ್ಯಕ್ತಿಯ ಎತ್ತರ, ತೂಕಗಳನ್ನು ನೇರವಾಗಿ ಅಳೆಯುತ್ತೇವೆ. ಆದರೆ ಒಂದು ವಸ್ತುವಿನ ಶಾಖವನ್ನು ಅಳೆಯುವಾಗ ಪರೋಕ್ಷವಾಗಿ ಒಂದು ಸಾಧನದ ಮೂಲಕ ಅಳೆಯುತ್ತೇವೆ. ಒಬ್ಬ ವ್ಯಕ್ತಿಯ ಬುದ್ದಿ ಶಕ್ತಿಯನ್ನು ಸಾಪೇಕ್ಷ ಅಳತೆಯ ಮೂಲಕಕಂಡುಕೊಳ್ಳುತ್ತೇವೆ. ಒಬ್ಬ ವ್ಯಕ್ತಿಯ ಬುದ್ದಿಶಕ್ತಿಯನ್ನು ಅಳೆದ ನಂತರ ಅದನ್ನು ಮಾನಕ ಅಂಕಗಳೊಂದಿಗೆ ಹೋಲಿಸಲಾಗುತ್ತದೆ. ಮನೋವೈಜ್ಞಾನಿಕ ಹಾಗೂ ಶೈಕ್ಷಣಿಕ ಅಳತೆಗಳು ಯಾವಾಗಲೂ ಸಾಪೇಕ್ಷವಾಗಿರುತ್ತವೆ.

ಮೌಲ್ಯಮಾಪನ:

        ಅಳತೆಯ ಮೂಲಕ ನೀಡಿದ ಅಂಕಗಳಿಗೆ ಮೌಲ್ಯ ನಿರ್ಧಾರ ಮಾಡುವುದಕ್ಕೆ ಮೌಲ್ಯಮಾಪನ ಎನ್ನುವರು. ಮೌಲ್ಯಮಾಪನ ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಅಳತೆಗಳನ್ನು ಒಳಗೊಂಡಿದೆ. ಗುಣಾತ್ಮಕ ಹಾಗೂ ಪರೀಮಾಣಾತ್ಮಕ ಅಳತೆಗಳನ್ನಾಧರಿಸಿ ಮೌಲ್ಯ ನಿರ್ಧಾರ ಕೈಗೊಳ್ಳಲಾಗುವುದು.

 

Text Box: ಪರಿಮಾಣಾತ್ಮಕ                        ಮತ್ತು ಗುಣಾತ್ಮಕ ಅಳತೆ
            


Text Box: ಮೌಲ್ಯ ನಿರ್ಧಾರ            


Text Box: ಮೌಲ್ಯಮಾಪನ            


                                                                         =                                                        +                                                      

                                                  

 

 

    ಮೌಲ್ಯಮಾಪನ ಎನ್ನುವುದು ಯವುದೇ ವಸ್ತುವಿಗೆ ಮೌಲ್ಯ ನಿರ್ಧರಿಸುವ ಕ್ರಿಯೆ ಅಥವಾ ಪ್ರಕ್ರಿಯೆಯಾಗಿದೆ. ಕಿರು ಪರೀಕ್ಷೆಯ ಮೂಲಕ ನಾವು ಅಳೆದಂತಹ ಅಂಶಗಳು ಮೌಲ್ಯಮಾಪನಕ್ಕೊಳಪಡುತ್ತವೆ.

ಮೌಲ್ಯಮಾಪನದ ವ್ಯಾಖ್ಯಾನಗಳು:

1.“ನಿಗದಿತ ಬೋಧನಾ ಉದ್ದೇಶಗಳನ್ನು ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಸಾಧಿಸಿದ್ದಾರೆ ಎಂಬುದನ್ನು

    ಕಂಡುಕೊಳ್ಳಲು, ಮಾಹಿತಿಯನ್ನು ಸಂಗ್ರಹಿಸುವ, ವಿಶ್ಲೇಷಿಸುವ ಮತ್ತು ಅರ್ಥೈಸುವಿಕೆಯ ಸುವ್ಯವಸ್ಥಿತ    

     ಪ್ರಕ್ರಿಯೆಯೇ ಮೌಲ್ಯಮಾಪನ.” ---- ಗ್ರಾನ್‌ ಲಂಡ್‌ ಮತ್ತು ಲಿನ್.‌

2. “ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳನ್ನು ಎಷ್ಟರ ಮಟ್ಟಿಗೆ ಸಾಧಿಸಿದ್ದಾರೆ ಎಂದು ಪರಿಗಣಿಸುವ ಒಂದು

     ಸುವ್ಯವಸ್ಥಿತವಾದ ಪ್ರಕ್ರಿಯೆಯೇ ಮೌಲ್ಯಮಾಪನ.” ----- ಐ.ಎಸ್.‌ ದಾಂಡೇಕರ್.

3. “ಸಾಧನೆಯ ಪ್ರತಿಭೆಯ ಕುರಿತು ನಿರ್ಧಾರ ತಳೆಯುವುದು. ಸಾಮಾನ್ಯವಾಗಿ ಇದು ವಿದ್ಯಾರ್ಥಿ ಗಳಿಸಿರುವ ಅಂಕಗಳ           

    ಪರಿಮಾಣವನ್ನು ಆಧರಿಸಿರುತ್ತದೆ.”   --- ಗೂಡ್ಸ್

ಶಿಕ್ಷಣದಲ್ಲಿ ಮೌಲ್ಯಮಾಪನದ ಪ್ರಾಮುಖ್ಯತೆ:

  1. ಶಿಕ್ಷಣ ಕ್ಷೇತ್ರದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮೌಲ್ಯಮಾಪನ ಅವಶ್ಯಕ.
  2. ಶಿಕ್ಷಣದ ಫಲಿತಾಂಶಗಳನ್ನು ಕಾಣಲು ಪೋಷಕರು ಕಾತುರರಾಗಿರುತ್ತಾರೆ.
  3. ಶಿಕ್ಷಣ ತಜ್ಷರು, ಆಡಳಿತಗಾರರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಕ್ಷಣದ ಗುರಿಗಳ ಸಾಧನೆಗಾಗಿ ಶ್ರಮವಹಿಸುತ್ತಾರೆ. ಆದ್ದರಿಂದ ಮೌಲ್ಯಮಾಪನದ ಮೂಲಕ ಗುರಿಗಳು ಎಷ್ಟರ ಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು ತಿಳಿಯಲು ಬಯಸುತ್ತಾರೆ.
  4. ಶಿಕ್ಷಣ ಕ್ಷೇತ್ರ ಒಂದು ಬೃಹತ್‌ ಉದ್ದಿಮೆಯಾಗಿದೆ, ಆದ್ದರಿಂದ ನಾವು ಈ ಉದ್ದಿಮೆಯಲ್ಲಿ ಪ್ರಕ್ರಿಯೆ ಹಾಗೂ ಉತ್ಪನ್ನಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ. ಬೋಧನಾ ಕಲಿಕಾ ಸನ್ನಿವೇಶದಲ್ಲಿ ಇವುಗಳನ್ನು ಅಳೆಯಲು ಮೌಲ್ಯಮಾಪನದ ತಂತ್ರಗಳು ಅತ್ಯಗತ್ಯವಾಗಿವೆ.
  5. ಶಿಕ್ಷಣದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಭಿನ್ನತೆಗಳಿಗೆ ಸೂಕ್ತ ಅವಕಾಶ ನೀಡಬೇಕಾಗಿದೆ, ಈ ಹಿನ್ನೆಲೆಯಲ್ಲಿ ಸೂಕ್ತ ಉದ್ದೇಶಗಳನ್ನು ರೂಪಿಸುವಾಗ ವಿದ್ಯಾರ್ಥಿಯ ಸಾಮರ್ಥ್ಯಗಳು, ಆಸಕ್ತಿಗಳು, ಮನೋಧೋರಣೆಗಳನ್ನು ಪರಿಗಣಿಸಬೇಕಾಗುತ್ತದೆ. ಇವುಗಳ ಬಗ್ಗೆ ಮಾಹಿತಿ ಶಿಕ್ಷಕನಿಗೆ ಸೂಕ್ತ ಮೌಲ್ಯಮಾಪನ ತಂತ್ರಗಳಿಂದ ಮಾತ್ರ ದೊರೆಯುತ್ತದೆ.
  6. ಉತ್ತಮ ಮೌಲ್ಯಮಾಪನ ಕಾರ್ಯಕ್ರಮ ಶಿಕ್ಷಣದ ಗುರಿಗಳನ್ನು ಸ್ಪಷ್ಟೀಕರಿಸಲು ನೆರವಾಗುತ್ತದೆ.
  7. ಮೌಲ್ಯಮಾಪನ ಪಠ್ಯಕ್ರಮದ ಸುಧಾರಣೆಗೆ ಸಹಾಯಕವಾಗಿದೆ.
  8. ಮೌಲ್ಯಮಾಪನ ಪಠ್ಯವಸ್ತು, ಕಲಿಕೆಯ ಅನುಭವಗಳು ಮತ್ತು ಪರೀಕ್ಷಾ ಸಾಧನಗಳಿಗೂ ಮತ್ತು ಶೈಕ್ಷಣಿಕ ಉದ್ದೇಶಗಳ ನಡುವೆ ಸಂಬಂಧ ಕಲ್ಪಿಸಲು ನೆರವಾಗುತ್ತದೆ.
  9. ಶೈಕ್ಷಣಿಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸಿಕೊಳ್ಳಲು ಸಹಾಯಕವಾಗಿದೆ.
  10. ಮೌಲ್ಯಮಾಪನ ಶಿಕ್ಷಕರು, ಆಡಳಿತಗಾರರು ಹಾಗೂ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ.
  11. ಮನೋವಿಜ್ಞಾನಿಗಳು ಹಾಗೂ ಸಲಹೆಗಾರರಿಗೆ ಮಾರ್ಗದರ್ಶನ ನೀಡಲು ಇದರ ಜ್ಞಾನದ ಅವಶ್ಯಕವಾಗಿದೆ.

ಮೌಲ್ಯಮಾಪನದ ಕಾರ್ಯಗಳು:

  1. ವೈಯಕ್ತಿಕವಾಗಿ ವಿದ್ಯಾರ್ಥಿಯ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ಸೌಲಭ್ಯ ಒದಗಿಸುವುದು.
  2. ವಿದ್ಯಾರ್ಥಿಗಳ ಸಾಮರ್ಥ್ಯಗಳು ಹಾಗೂ ಮಿತಿಗಳನ್ನು ಪತ್ತೆ ಹಚ್ಚಲು.
  3. ಯಾವ ಕ್ಷೇತ್ರದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಗುರುತಿಸಲು.
  4. ಪಠ್ಯಕ್ರಮ ಮತ್ತು ಪಠ್ಯವಸ್ತುವನ್ನು ಅಗತ್ಯಕ್ಕನುಗುಣವಾಗಿ ಮಾರ್ಪಾಡು ಮಾಡಿಕೊಳ್ಳಲು.
  5. ವಿದ್ಯಾರ್ಥಿ ಸಮೂಹಕ್ಕೆ ಹಾಗೂ ವೈಯಕ್ತಿಕವಾಗಿ ಅವರಿಗೆ ಸೂಕ್ತ ಅನುಭವಗಳನ್ನು ಒದಗಿಸುವುದಕ್ಕಾಗಿ.

ಅಳತೆ ಮತ್ತು ಮೌಲ್ಯಮಾಪನಕ್ಕಿರುವ ವ್ಯತ್ಯಾಸಗಳು:

ಅಳತೆ

ಮೌಲ್ಯಮಾಪನ

  1. ಅಳತೆಯು ವಿದ್ಯಾರ್ಥಿಗಳ ವರ್ತನೆಯ ಪರಿಮಾಣಾತ್ಮಕವಿವರಗಳನ್ನೊಳಗೊಂಡಿದೆ.
  1. ಮೌಲ್ಯಮಾಪನ ವಿದ್ಯಾರ್ಥಿಗಳ ವರ್ತನೆಯ ಪರಿಮಾಣಾತ್ಮಕ ಹಾಗೂ ಗುಣಾತ್ಮಕ ವಿವರಗಳನ್ನೊಳಗೊಂಡಿದೆ.
  1. ಸಾಧನಾ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಪ್ರಗತಿಯನ್ನು ಅಳೆಯಲಾಗುತ್ತದೆ.

2. ಪಠ್ಯಕ್ರಮದಲ್ಲಿನ ಪ್ರಮುಖ ಉದ್ದೇಶಗಳು ಎಷ್ಟರ ಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು ತಿಳಿಯಲು ನೆರವಾಗುತ್ತದೆ.

 

  1. ವಿದ್ಯಾರ್ಥಿಯಲ್ಲಿ ಎಷ್ಟರ ಮಟ್ಟಿಗೆ ಕಲಿಕಾ ಪ್ರಗತಿಯಾಗಿದೆ ಎಂದು ಅಳೆಯಲಾಗುತ್ತದೆ.

3. ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆ ತಿಳಿಯಲು ನೆರವಾಗುತ್ತದೆ.

  1. ಅಳತೆ ಸೀಮಿತ ವ್ಯಾಪ್ತಿಯನ್ನು ಹೊಂದಿದೆ.

4. ಮೌಲ್ಯಮಾಪನ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.

  1. ಕೇವಲ ಅಳತೆಯಿಂದ ವಿದ್ಯಾರ್ಥಿಯ ಎಲ್ಲಾ ವರ್ತನೆಗಳನ್ನು ಅಳೆಯಲು ಸಾಧ್ಯವಿಲ್ಲ.

5. ಮೌಲ್ಯಮಾಪನದಿಂದ ವಿದ್ಯಾರ್ಥಿಯ ಎಲ್ಲಾ ವರ್ತನೆಗಳನ್ನು ಅಳೆಯಲು ಸಾಧ್ಯ.

 

  1. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ವಿದ್ಯಾರ್ಥಿಯ ಪ್ರಸ್ತುತ ಸ್ಥಿತಿಯನ್ನು ನಿರ್ಧರಿಸಲು ಅಳತೆ ಸಹಾಯ ಮಾಡುತ್ತದೆ.

6. ವಿವಿಧ ಅಥವಾ ಒಂದು ನಿರ್ಧಿಷ್ಟ ಕ್ಷೇತ್ರದಲ್ಲಿ ವಿದ್ಯಾರ್ಥಿಯ ಹಿಂದಿನ, ಪ್ರಸ್ತುತ ಹಾಗೂ ಭವಿಷ್ಯದ ಪ್ರಗತಿಯನ್ನು ನಿರ್ಧರಿಸಲು ಮೌಲ್ಯಮಾಪನ ಸಹಾಯ ಮಾಡುತ್ತದೆ.

  1. ಅಳತೆ ಮಾಡಲು ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಸಹಕಾರದ ಅಗತ್ಯವಿಲ್ಲ.

7. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಹಕಾರದ ಅಗತ್ಯವಿದೆ.

  1. ಇದು ಒಂದು ಸನ್ನಿವೇಶವನ್ನು ವಿವರಿಸುತ್ತದೆಯೇ ಹೊರತು, ಅದರ ಮೌಲ್ಯವನ್ನಲ್ಲ.

8. ಇದು ಸನ್ನಿವೇಶವನ್ನು ವಿವರಿಸುತ್ತದೆ ಮತ್ತು ಅದರ ಮೌಲ್ಯವನ್ನು ನಿರ್ಣಯಿಸಲು ನೆರವಾಗುತ್ತದೆ.

ಮೌಲ್ಯಮಾಪನದ ತತ್ವಗಳು:

1.     ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದನ್ನು ಮೌಲ್ಯಮಾಪನ ಮಾಡಬೇಕೆಂಬುದನ್ನು ನಿರ್ಧರಿಸಿಕೊಂಡು ಅದಕ್ಕೆ ಪ್ರಾತಿನಿಧ್ಯ ನೀಡಬೇಕು.

2.     ಮೌಲ್ಯಮಾಪನ ತಂತ್ರಗಳನ್ನು ಮೌಲ್ಯಮಾಪನದ ಉದ್ದೇಶಗಳನ್ನು ಆಧರಿಸಿ ಆಯ್ಕೆಮಾಡಿಕೊಳ್ಳಬೇಕು.

3.     ಸಮಗ್ರ ಮೌಲ್ಯಮಾಪನ ವಿವಿಧ ಮೌಲ್ಯಮಾಪನ ತಂತ್ರಗಳನ್ನು ಒಳಗೊಂಡಿರಬೇಕು.

4.     ಮೌಲ್ಯಮಾಪನ ತಂತ್ರಗಳನ್ನು ಬಳಸಿಕೊಳ್ಳುವಾಗ ಅವುಗಳ ಗುಣಗಳು ಮತ್ತು ಮಿತಿಗಳನ್ನು ಅರಿತಿರಬೇಕು.

5.     ಮೌಲ್ಯಮಾಪನವೇ ಅಂತಿಮವಲ್ಲ, ಅದು ಅಂತಿಮ ಗುರಿಯ ಕಡೆ ಸಾಗಲು ಇರುವ ಮಾರ್ಗ.

ಮೌಲ್ಯಮಾಪನ ಪ್ರಕ್ರಿಯೆ:

1.    ಮೌಲ್ಯಮಾಪನವು ನಿರಂತರ ಪ್ರಕ್ರಿಯೆಯಾಗಿದೆ:

     ವರ್ಷದ ಕೊನೆಗೆ ಪರೀಕ್ಷೆಯನ್ನು ಏರ್ಪಾಡು ಮಾಡುವುದು ಮತ್ತು ಮುಂಬಡ್ತಿಯ ಉದ್ದೇಶಕ್ಕಾಗಿ ಫಲಿತಾಂಶವನ್ನು ಬಳಸುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸುವುದು ಆಯ್ದ ಅಭ್ಯಾಸ ಮತ್ತು ಕೊನೇ ಗಳಿಗೆಯ ಅಭ್ಯಾಸಕ್ಕೆ ದಾರಿ ಮಾಡಿಕೊಡುತ್ತದೆ. ಮೌಲ್ಯಮಾಪನ ಒಂದು ನಿರಂತರ ಪ್ರಕ್ರಿಯೆಯಾಗಬೇಕು, ನಿರಂತರ ಮೌಲ್ಯಮಾಪನದ ಮೂಲಕ ಮಕ್ಕಳ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಬಗ್ಗೆ ಅಮೂಲ್ಯ ಆಧಾರಾಂಶಗಳನ್ನು ಕ್ರಮಬದ್ದವಾಗಿ ಪಡೆಯಲು ಸಾಧ್ಯವಾಗುತ್ತದೆ. ಅಪೇಕ್ಷಿತ ಬೆಳವಣಿಗೆ ಮತ್ತು ಮಗುವಿನ ವ್ಯಕ್ತಿತ್ವದ ವಿವಿಧ ಅಂಶಗಳ ಅಭಿವೃದ್ದಿಯಲ್ಲಿ ಬಹಿರಂಗವಾಗಿ ತಿಳಿಸಿದ ಉದ್ದೇಶಗಳನ್ನು ಸಾಧಿಸುವ ದೃಷ್ಟಿಯಿಂದ ಪರಿಹಾರಾತ್ಮಕ ಮತ್ತು ಸಂಪದೀಕರಣಗೊಳಿಸಿದ ಬೋಧನೆಯನ್ನು ಒದಗಿಸುವಲ್ಲಿ ಇದು ಸಹಾಯಕವಾಗುವುದು. ಮೌಲ್ಯಮಾನವನ್ನು ಬೋಧನೆಯಾ ಪೂರ್ವದಲ್ಲಿ, ಬೋಧನಾ ಅವಧಿಯಲ್ಲಿ ಮತ್ತು ಬೋಧನೆಯ ನಂತರ ಮಾಡುವ ಮೂಲಕ ಮೌಲ್ಯಮಾಪನವನ್ನು ನಿರಂತರವಾಗಿಸಬೇಕು. ಮೌಲ್ಯಮಾಪನ ನಿರಂತರವಾಗಿದ್ದಾಗ ಮಾತ್ರ ವಿದ್ಯಾರ್ಥಿಗಳ ವರ್ತನೆಯಲ್ಲಿ ಅಪೇಕ್ಷಿತ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ.  ಈಗ ಶಾಲಾ ಶಿಕ್ಷಣದಲ್ಲಿ ಜಾರಿಯಲ್ಲಿರುವಂತಹ ಸೆಮಿಸ್ಟರ್‌ ಪದ್ಧತಿಯಲ್ಲಿ ನಿರಂತರ ಮೌಲ್ಯಮಾಪನ ಪದ್ದತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.

2.    ಮೌಲ್ಯಮಾಪನವು ಸಮಗ್ರಮೌಲ್ಯಮಾಪನವಾಗಿದೆ:

           ಮೌಲ್ಯಮಾಪನದ ಸಾಂಪ್ರದಾಯಿಕ ಪದ್ದತಿಯ ಮುಖ್ಯ ಕೊರತೆಗಳಲ್ಲಿ ಒಂದೆಂದರೆ ಅದರ ವ್ಯಾಪಕತೆಯು ವ್ಯಾಸಂಗಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದು. ವ್ಯಾಸಂಗಿಕವಲ್ಲದ ಅಂಶಗಳನ್ನು ಸಾಧಿಸಲು ಪ್ರಯತ್ನಿಸುತ್ತಿಲ್ಲ. ಬೋಧನೆಯ ಎಲ್ಲಾ ಪ್ರಯತ್ನಗಳೂ ವ್ಯಾಸಂಗಿಕ ಕ್ಷೇತ್ರಕ್ಕೆ ಕೇಂದ್ರೀಕರಿಸಲ್ಫಟ್ಟಿವೆ. ನಾವು ವ್ಯಾಸಂಗಿಕವಲ್ಲದ ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೇವೆ. ಅದರ ಪರಿಣಾಮ ಮಕ್ಕಳ ಸರ್ವಾಂಗಿಣ ಅಭಿವೃದ್ದಿಯ ಉದ್ದೇಶವಿದ್ದಾಗಲೂ ಸಹ ಶಿಕ್ಷಣವು ಬೌದ್ದಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ಕಲಿಯುವವನ ವ್ಯಕ್ತಿತ್ವ ಸಮಗ್ರ ಅಭಿವೃದ್ದಿಯ ಉದ್ದೇಶವು ಈಡೇರದೇ ಉಳಿಯುವುದು.

Comments

Popular posts from this blog

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)

ಮೌಲ್ಯಮಾಪನದ ವಿಧಗಳು