ಮೌಲ್ಯಮಾಪನದ ವಿಧಗಳು
ಮೌಲ್ಯಮಾಪನದ ವಿಧಗಳು ರೂಪಣಾತ್ಮಕ/ರಚನಾತ್ಮಕ ಮೌಲ್ಯಮಾಪನ: ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಯಲ್ಲಿ ಉಂಟಾಗುವ ಕಲಿಕೆಯ ಪ್ರಗತಿಯನ್ನು ತಿಳಿಯಲು ಈ ವಿಧಾನದ ಮೌಲ್ಯಮಾಪನವನ್ನು ಬಳಸಲಗುವುದು. ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕಲಿಕಯಲ್ಲಿನ ಯಶಸ್ಸು ವಿಫಲತೆಗಳ ಬಗ್ಗೆ ನಿರಂತರವಾಗಿ ಹಿಮ್ಮಾಹಿತಿ ಒದಗಿಸುವುದೇ ಇದರ ಪ್ರಮುಖ ಉದ್ದೇಶ. ವಿದ್ಯಾರ್ಥಿಗಳಿಗೆ ಇದರಿಂದ ದೊರೆಯುವ ಹಿಮ್ಮಾಹಿತಿಯು ಕಲಿಕೆಯಲ್ಲಿನ ಅವನ ಯಶಸ್ಸನ್ನು ಪುಷ್ಟೀಕರಿಸುತ್ತದೆ ಮತ್ತು ನಿರ್ದಿಷ್ಟ ಕಲಿಕೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿರುವ ಕಲಿಕಾ ದೋಷಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಶಿಕ್ಷಕರಿಗೆ ದೊರೆಯುವ ಹಿಮ್ಮಾಹಿತಿ ಅವರ ಬೋಧನಾ ವಿಧಾನಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲು ಮತ್ತು ಸೂಕ್ತ ಗುಂಪಿನ ಹಾಗೂ ವೈಯಕ್ತಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತದೆ. ರೂಪಣಾತ್ಮಕ ಮೌಲ್ಯಮಾಪನವು ಬೋಧನೆಯ ಹಂತದಲ್ಲಿ ಪ್ರತಿಯೊಂದು ಬೋಧನಾ ಘಟಕಕ್ಕೆ ರೂಪಿಸುವ ಪರೀಕ್ಷೆಗಳನ್ನೊಳಗೊಳುತ್ತದೆ. ಈ ಘಟಕ ಪರೀಕ್ಷೆಗಳು ಪ್ರತಿಇಯೊಂದು ಹಂತದಲ್ಲಿ ನಾವು ವಿದ್ಯಾರ್ಥಿಗಳಲ್ಲಿ ಕಾಣಬೇಕಾದ ಅಪೇಕ್ಷಿತ ಕಲಿಕೆಯ ಫಲಗಳನ್ನು ಕಂಡುಕೊಳ್ಳಲು ನೀಡುವ ಪ್ರಭುತ್ವದ ಪರೀಕ್ಷೆಗಳಾಗಿವೆ. ರೂಪಣಾತ್ಮಕ ಮೌಲ್ಯಮಾಪನದಲ್ಲಿ ಬಳಸುವ ಪರೀಕ್ಷೆಗಳು ಸಾಮಾನ್ಯವಾಗಿ ಶಿಕ್ಷಕ ನಿರ್ಮಿತ ಪರೀಕ್ಷೆಗಳಾಗಿರುತ್ತವೆ. ಇದರೊಂದಿಗ...