ಶ್ರೇಣಿ ಪದ್ದತಿ
ಶ್ರೇಣಿ ಪದ್ದತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಶ್ರೇಣಿಗಳ ಮೂಲಕ ಎಂದು(A,A+,B,B+ ಇತ್ಯಾದಿ ) ಸೂಚಿಸುವುದೇ ಶ್ರೇಣಿ ಪದ್ದತಿಯಾಗಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ- ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಂಕಗಳ ಬದಲಾಗಿ ಶ್ರೇಣಿಗಳಿಂದ ನಿರ್ಧರಿಸುವುದಕ್ಕೆ ಶ್ರೇಣಿ ನೀಡುವಿಕೆ ಎನ್ನುತ್ತಾರೆ. ಉದಾ: ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು. ವ್ಯಾಖ್ಯಾನ: ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು ಪ್ರಕಾರ –“ ಸೃಷ್ಠಿಸಿದ ಪ್ರಮಾಣಗಳನ್ನು ಅನುಸರಿಸಿ ಶಿಕ್ಷಕರು ವಿದ್ಯಾರ್ಥಿಯ ಅಭಿವೃದ್ದಿ ಅಥವಾ ಸಾಧನೆಯನ್ನು ಮೌಲ್ಯೀಕರಿಸಿ ಕಟ್ಟುವ ಕಾರ್ಯನಿರ್ಣಯದಲ್ಲಿ ಅನುಸರಿಸುವ ವಿಧಾನವಾಗಿದೆ. ಇದನ್ನೇ ಅಂಕನ ಪದ್ದತಿ ಎಲ್ಲವೇ ಸ್ಥಾನ ನಿರ್ದೇಶನ ಎಂದು ಕರೆಯಲಾಗಿದೆ. ಶ್ರೇಣಿ ಪದ್ದತಿಯ ಮಹತ್ವ: ವಿದ್ಯಾರ್ಥಿ ಕಲಿತ ವಿಷಯಾಧಾರಿತ ಆಧಾರದ ಮೇಲೆ ಶಾಲೆಯಲ್ಲಿ ಸೂಕ್ತವಾದ ದರ್ಜೆ ನೀಡುವುದು. ವಿದ್ಯಾರ್ಥಿಗೆ ನಿಗದಿಪಡಿಸಿದ ವಿಷಯದಲ್ಲಿ ದರ್ಜೆ ನೀಡುವುದು. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗೆರೆಕೊರೆದಂತೆ ಶ್ರೇಣಿಗಳ ಮೂಲಕ ಸೂಚಿಸುವುದು. ಸಮಿತಿಯವರು ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ...